varthabharthi


ಕರ್ನಾಟಕ

ಹನೂರು: ಬೈಕ್ ನಿಂದ ಬಿದ್ದು ಸಹಸವಾರನಿಗೆ ಗಾಯ

ವಾರ್ತಾ ಭಾರತಿ : 14 Aug, 2019

ಹನೂರು: ಹನೂರು ಪಟ್ಟಣದ ಹೊರ ವಲಯದ ಮಲೈಮಹದೇಶ್ವರ ಕ್ರೀಡಾಂಗಣದ ಬಳಿ ರಾಮಾಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ ನಿಂದ  ಬಿದ್ದು ಸಹಸವಾರ ಗಾಯಗೊಂಡ ಘಟನೆ ನಡೆದಿದೆ.

ಕಾರ್ಯ ನಿಮಿತ್ತ ಹನೂರು ಪಟ್ಟಣಕ್ಕೆ ಆಗಮಿಸಿದ್ದ ಅಜ್ಜಿಪುರ ಗ್ರಾಮದವರಾದ ಕುಮಾರ್ ಮತ್ತು ಮಾದುರವರು ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ರಾಮಾಪುರ ರಸ್ತೆಯ ಮಲೈಮಹದೇಶ್ವರ ಕ್ರೀಡಾಂಗಣದ ಬಳಿ ಇರುವ ರಾಮಯ್ಯನ ಕೆರೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಕೆಳಗಡೆ ಬಿದಿದ್ದು, ಬೈಕ್ ಸವಾರ ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ. ಹಿಂಬದಿಯಲ್ಲಿ ಕುಳಿತ್ತಿದ್ದ ಮಾದು ಎಂಬವರಿಗೆ ಕಾಲಿಗೆ ತೀವ್ರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)