varthabharthi

ರಾಷ್ಟ್ರೀಯ

ಆಯೋಧ್ಯೆ ರಾಮ ಹುಟ್ಟಿದ ಸ್ಥಳ ಎನ್ನುವುದು ಹಿಂದೂಗಳ ಮೂಲ ನಂಬಿಕೆ: ರಾಮ್ ಲಲ್ಲಾ ಪರ ಸುಪ್ರೀಂನಲ್ಲಿ ವಾದ

ವಾರ್ತಾ ಭಾರತಿ : 14 Aug, 2019

ಹೊಸದಿಲ್ಲಿ , ಆ.14:  ಆಯೋಧ್ಯೆ ಶ್ರೀರಾಮ ಹುಟ್ಟಿದ ಸ್ಥಳ ಎನ್ನುವುದು ಹಿಂದೂಗಳ  ನಂಬಿಕೆಯಾಗಿದೆ.  ಆದರೆ ಇದು ಎಷ್ಟು ತರ್ಕಬದ್ಧ ಎಂದು ನೋಡಲು ನ್ಯಾಯಾಲಯ ಹೋಗಬಾರದು ಎಂದು ಸುಪ್ರೀಂ ಕೋರ್ಟ್ ನಲ್ಲಿ ರಾಮ್ ಲಲ್ಲಾ ವಿರಾಜ್ ಮಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ವೈದ್ಯನಾಥ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆಯ 6ನೇ ದಿನವಾಗಿರುವ ಬುಧವಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ  ಮುಂದೆ ಹಿರಿಯ ವಕೀಲ ವೈದ್ಯನಾಥ್ ವಾದ ಮಂಡಿಸಿದರು.

ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿ 14 ಮನವಿಗಳು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದವು. ಅಯೋಧ್ಯೆಯ 2.77 ಎಕರೆ ಜಮೀನನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೊಹಿ ಅಖಾರಾ ಮತ್ತು ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ  ಆದೇಶ ನೀಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)