varthabharthi

ಕರಾವಳಿ

ಆ.15: ಪಿಎಫ್ಐ ವತಿಯಿಂದ ಬಂಟ್ಟಾಳದಲ್ಲಿ ಸ್ವಾತಂತ್ರೋತ್ಸವ, ಸಾರ್ವಜನಿಕ ಸಭೆ

ವಾರ್ತಾ ಭಾರತಿ : 14 Aug, 2019

ಬಂಟ್ವಾಳ,  ಆ. 14: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳದಾದ್ಯಂತ ಸುಮಾರು 40 ಕಡೆ ಸ್ವಾತಂತ್ರೋತ್ಸವ ಆಚರಣೆ ನಡೆಸಲಾಗುವುದು. ಈ ಬಾರಿ ಜಲಪ್ರವಾಹದಿಂದ ಲಕ್ಷಾಂತರ ಜನರ ಜೀವನ ತತ್ತರಿಸಿ ಹೋಗಿದ್ದು ಈ ಕಾರಣದಿಂದ ಅತ್ಯಂತ ಸರಳ ರೀತಿಯಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಇದರ 'ನಿರ್ಭೀತಿಯಿಂದ, ಘನತೆಯಿಂದ ಜೀವಿಸಿ' ಅಭಿಯಾನದ ಅಂಗವಾಗಿ ಭಯಮುಕ್ತ ಸ್ವಾತಂತ್ರ್ಯ ಎಂಬ ಘೋಷಣೆಯೊಂದಿಗೆ ಆ.15 ರಂದು ಸಂಜೆ 4:30ಕ್ಕೆ ಎಮ್.ಜೆ.ಎಮ್ ಹಾಲ್ ಮಿತ್ತಬೈಲ್ ಬಿಸಿರೋಡಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯ ಕೆ ಎಮ್ ಶರೀಫ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಭಾ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹಮದ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗೇರು ನಿಗಮ ಮಂಡಳಿಯ ಮಾಜಿ ರಾಜ್ಯಾಧ್ಯಕ್ಷ ಬಿ ಎಚ್ ಖಾದರ್, ಎಸ್ಡಿಪಿಐ ರಾಜ್ಯ ಪ್ರ, ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಎಮ್.ಜೆ.ಎಮ್ ಅಧ್ಯಕ್ಷ ಅಬ್ದುಲ್ ಹಮೀದ್, ನ್ಯಾಯವಾದಿ ಅರುಣ್ ರೋಶನ್ ಡಿಸೋಜಾ, ವಾರ್ತಾಭಾರತಿ ಕನ್ನಡ ದೈನಿಕ ಪತ್ರಿಕೆಯ ಉಪ ಸಂಪಾದಕ ಇಮ್ತಿಯಾಝ್ ಶಾ ತುಂಬೆ, ವಕ್ಫ್ ಸಲಹಾ ಜಿಲ್ಲಾ ಸಮಿತಿ ಸದಸ್ಯರು ಎಸ್.ಎಮ್ ಮೊಹಮ್ಮದಾಲಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಕೋಶಾಧಿಕಾರಿ ರಫೀಕ್ ದಾರಿಮಿ ಮತ್ತಿತರರು ಉಪಸ್ಥಿತರಿರುವರು ಎಂದು ಪಾಪ್ಯುಲರ್ ಪ್ರಂಟ್ ಬಂಟ್ವಾಳ ತಾಲೂಕು ಪ್ರ. ಕಾರ್ಯದರ್ಶಿ ಸಲೀಮ್ ಕುಂಪನಮಜಲ್  ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)