varthabharthi

ಕ್ರೀಡೆ

ಜೂ. ಕುಸ್ತಿ ವರ್ಲ್ಡ್ ಚಾಂಪಿಯನ್‌ಶಿಪ್ ದೀಪಕ್ ಪೂನಿಯಾಗೆ ಚಿನ್ನ

ವಾರ್ತಾ ಭಾರತಿ : 15 Aug, 2019

 ಎಸ್ಟೋನಿಯಾ, ಆ.14: ಇಲ್ಲಿ ನಡೆಯುತ್ತಿರುವ ಜೂನಿಯರ್ ಕುಸ್ತಿ ವರ್ಲ್ಡ್‌ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಭಾರತದ ದೀಪಕ್ ಪೂನಿಯಾ ಚಿನ್ನ ಜಯಿಸಿದ್ದಾರೆ. ದೀಪಕ್ ಪೂನಿಯಾ ಅವರು 86 ಕೆ.ಜಿ. ವಿಭಾಗದಲ್ಲಿ ರಶ್ಯದ ಅಲಿಕ್ ಶೆಬ್‌ಝೂಕಾವ್‌ರನ್ನು ಮಣಿಸಿ ಚಿನ್ನ ಜಯಿಸುವ ಮೂಲಕ ಭಾರತದ 18 ವರ್ಷಗಳ ಪದಕದ ಬರವನ್ನು ನೀಗಿಸಿದ್ದಾರೆ.

    ಫೈನಲ್‌ನಲ್ಲಿ ಇಬ್ಬರು 2-2 ರಿಂದ ಸಮಬಲ ಸಾಧಿಸಿದರು. ಆದರೆ ಭಾರತದ ಪೂನಿಯಾರನ್ನು ವಿಜಯಿ ಎಂದು ಘೋಷಿಸಲಾಯಿತು.

 ಜೂನಿಯರ್ ಕುಸ್ತಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪೂನಿಯಾ 2017ರಲ್ಲಿ 5ನೇ ಸ್ಥಾನ , 2018ರಲ್ಲಿ ಬೆಳ್ಳಿ ಪಡೆದಿದ್ದರು. 2016ರಲ್ಲಿ ಕೆಡೆಟ್ ವರ್ಲ್ಡ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದರು. 2001ರಲ್ಲಿ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ರಮೇಶ್ ಕುಮಾರ್(69 ಕೆ.ಜಿ) ಮತ್ತು ಪಲ್ವಿಂದರ್ ಸಿಂಗ್ ಚೀಮಾ (130 ಕೆ.ಜಿ) ಕೊನೆಯ ಬಾರಿ ಪ್ರಶಸ್ತಿ ಗಳಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)