varthabharthi

ನಿಧನ

ಹಾಜಿ ಇದಿನಬ್ಬ

ವಾರ್ತಾ ಭಾರತಿ : 16 Aug, 2019

ಕಿನ್ನಿಗೋಳಿ : ಇಲ್ಲಿನ ಕಲ್ಕರೆ ಸಾಲೆಮನೆ ನಿವಾಸಿ ಹಾಜಿ ಇದಿನಬ್ಬ (89) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ತನ್ನ ಸ್ವಗೃಹದಲ್ಲಿ ಇತ್ತೀಚೆಗೆ ನಿಧನರಾದರು.

ಮೃತರು ಹಲವು ದಶಕಗಳ ಕಾಲ ಕೃಷಿ ಹಾಗೂ ಹೈನುಗಾರಿಕೆ ಮೂಲಕ ಜೀವನ ಕಟ್ಟಿಕೊಂಡಿದ್ದರು. ಇತ್ತೀಚೆಗಿನ ಕೆಲವು ವರ್ಷಗಳಿಂದ ವಯೋ ಸಹಜ ಕಾರಣದಿಂದಾಗಿ ಕೃಷಿ ಚಟುವಟಿಕೆಯಿಂದ ದೂರವಿದ್ದರು. ಮುಸ್ಲಿಂ ಸಮುದಾಯದ ಧಾರ್ಮಿಕ ಶಿಕ್ಷಣ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಕಲ್ಕರೆಯಲ್ಲಿರುವ ಮಿಸ್ಬಾಹುಲ್ ಮದೀನಾ ಧಾರ್ಮಿಕ ಶಿಕ್ಷಣ ಸಂಸ್ಥೆಗೆ‌ ಇವರು ತನ್ನ ಜಮೀನಿನಲ್ಲಿ ಬಹುಪಾಲು ಜಾಗ ನೀಡಿ ನಿರ್ಮಾಣಕ್ಕೆ ಪ್ರಮುಖ ಪಾತ್ರವಹಿಸಿದ್ದರು.

ಮೃತರು ಪತ್ನಿ, ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)