ಫೆಡರರ್ಗೆ ಆಘಾತ ನೀಡಿದ ರುಬ್ಲೆವ್
ಎಟಿಪಿ ಸಿನ್ಸಿನಾಟಿ ಮಾಸ್ಟರ್ಸ್
ಸಿನ್ಸಿನಾಟಿ, ಆ. 16: ಎಟಿಪಿ ಸಿನ್ಸಿನಾಟಿ ಮಾಸ್ಟರ್ಸ್ನಲ್ಲಿರಶ್ಯದ ಆ್ಯಂಡ್ರೂ ರುಬ್ಲೆವ್ರನ್ನು ಮೊದಲ ಬಾರಿ ಎದುರಿಸಿದ ಹಿರಿಯ ಟೆಸ್ಟ್ ತಾರೆ ರೋಜರ್ ಫೆಡರರ್ ಆಘಾತಕಾರಿ ಸೋಲುಂಡಿದ್ದಾರೆ.
ಏಳು ಬಾರಿ ಸಿನ್ಸಿನಾಟಿ ಚಾಂಪಿಯನ್ ಆಗಿರುವ ಫೆಡರರ್ ಗುರುವಾರ ನಡೆದ ಪುರುಷರ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ರಶ್ಯದ 21ರ ಹರೆಯದ ಆಟಗಾರ ರುಬ್ಲೆವ್ ವಿರುದ್ಧ 3-6, 4-6 ನೇರ ಸೆಟ್ಗಳಿಂದ ಸೋತಿದ್ದಾರೆ. ಕಳೆದ ವಾರ 38ನೇ ವರ್ಷಕ್ಕೆ ಕಾಲಿಟ್ಟಿರುವ ಫೆಡರರ್ ವಿಂಬಲ್ಡನ್ ಫೈನಲ್ನಲ್ಲಿ ನೊವಾಕ್ ಜೊಕೊವಿಕ್ಗೆ ಸೋತ ಬಳಿಕ ಎರಡನೇ ಪಂದ್ಯ ಆಡಿದರು. ಗಾಯದ ಸಮಸ್ಯೆಯಿಂದಾಗಿ ಕಳೆದ ಋತುವಿನಲ್ಲಿ ಆಡದ ರುಬ್ಲೆವ್ 20 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ಗೆ ಶಾಕ್ ನೀಡಿದರು.
Next Story