ಪ್ರೊ ಕಬಡ್ಡಿ ಲೀಗ್: ಮುಂಬಾಗೆ ಗೆಲುವು
ಅಹ್ಮದಾಬಾದ್, ಆ.16: ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ನಲ್ಲಿ ಶುಕ್ರವಾರ ನಡೆದ 43ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 34-30 ಅಂಕಗಳ ಅಂತರದಿಂದ ಮಣಿಸಿತು. ಮುಂಬಾ ಪರ ರೋಹಿತ್ ಬನಿಯನ್ 9 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಅಥುಲ್(8) ಹಾಗೂ ಸಂದೀಪ್ ನರ್ವಾಲ್(6) ಸಾಥ್ ನೀಡಿದರು. ಪರಾಜಿತ ಪಾಟ್ನಾದ ಪರ ಮುಹಮ್ಮದ್ ಇಸ್ಮಾಯೀಲ್ ಹಾಗೂ ಪರ್ದೀಪ್ ನರ್ವಾಲ್ 6 ಅಂಕ ಗಳಿಸಿದರು.
8 ಪಂದ್ಯಗಳಲ್ಲಿ 4ನೇ ಜಯ ದಾಖಲಿಸಿದ ಮುಂಬಾ ಒಟ್ಟು 23 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ತಲುಪಿದೆ.
Next Story