varthabharthi

ಗಲ್ಫ್ ಸುದ್ದಿ

ಅಲ್ ಮದೀನಾ ಮಂಜನಾಡಿ ದಮಾಮ್ ವಲಯ ನೂತನ ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 18 Aug, 2019

ಉಸ್ಮಾನ್ ಮಂಜನಾಡಿ, ಇಬ್ರಾಹಿಂ ಪಡಿಕ್ಕಲ್, ರಹೀಂ ಉಚ್ಚಿಲ

ದಮಾಮ್, ಆ.18: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ದಮ್ಮಾಮ್ ವಲಯ ಸಮಿತಿ ಮಹಾ ಸಭೆಯು ಇತ್ತೀಚೆಗೆ ಅಲ್ ಮದೀನಾ ದಮ್ಮಾಮ್ ಹಾಲ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಎನ್.ಎಸ್ ಅಬ್ದುಲ್ಲಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಬ್ಬಲ್ ರಝಾಕ್ ಸಖಾಫಿ ಉಸ್ತಾದ್ ರವರು ಪ್ರಾರ್ಥನೆಗೈದರು. ಹೈದರ್ ನಯಿಮಿ ಉಸ್ತಾದ್ ರವರು ಕಿರಾಅತ್ ಪಠಿಸಿದರು. ಉದ್ಘಾಟಣೆ ಯನ್ನು ಇಝಿದ್ದೀನ್ ಮುಸ್ಲಿಯಾರ್ ನೆರವೇರಿಸಿದರು. ಮುಹಮ್ಮದ್ ಮಳೆಬೆಟ್ಟು ವರದಿ ವಾಚಿಸಿದರು. ಲೆಕ್ಕ ಪತ್ರವನ್ನು ಇಕ್ಬಾಲ್ ಮಲ್ಲೂರ್ ಮಂಡಿಸಿದರು. ಅಬೂಬಕ್ಕರ್ ಮದನಿ ಜುಬೈಲ್ ಹಿತವಚನ ನೀಡಿದರು.

ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಸ್ಮಾನ್ ಮಂಜನಾಡಿ, ಉಪಾಧ್ಯಕ್ಷರಾಗಿ ಮೂಸ ಹಾಜಿ, ಅಬೂಬಕ್ಕರ್ ಮದನಿ, ಖಾಸಿಂ ಅಡ್ಡೂರ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಡಿಕ್ಕಲ್, ಕಾರ್ಯದರ್ಶಿಗಳಾಗಿ ಇಕ್ಬಾಲ್ ಕೈರಂಗಳ, ಅನ್ವರ್ ಪಡಿಬಿದ್ರೆ, ಕೋಶಾಧಿಕರಿಯಾಗಿ ರಹೀಂ ಉಚ್ಚಿಲ, ಲೆಕ್ಕ ಪರಿಶೋಧಕರಾಗಿ ಅಶ್ರಫ್ ನಾವುಂದ, ಸಲಹೆಗಾರರಾಗಿ ಇಸ್ಮಾಯಿಲ್ ಪೊಯ್ಯಲ್, ಬಶೀರ್ ತೋಟಲ್, ಬಾಬಾ ಲತೀಫ್, ಅಬ್ದುಲ್ ರಝಾಕ್ ಸಖಾಫಿ ಹಾಗು 21 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಇಕ್ಬಾಲ್ ಮಲ್ಲೂರ್ ಸ್ವಾಗತಿಸಿ, ಇಬ್ರಾಹಿಂ ಪಡಿಕ್ಕಲ್ ಧನ್ಯವಾದ ಸಮರ್ಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)