varthabharthi

ರಾಷ್ಟ್ರೀಯ

ಉತ್ತರ ಪ್ರದೇಶದ ಸಚಿವ ಸ್ವತಂತ್ರ ದೇವ್ ಸಿಂಗ್ ಸಚಿವ ಸಂಪುಟಕ್ಕೆ ರಾಜೀನಾಮೆ

ವಾರ್ತಾ ಭಾರತಿ : 19 Aug, 2019

ಲಕ್ನೋ, ಆ.19:   ಉತ್ತರ ಪ್ರದೇಶದ ಬಿಜೆಪಿ  ಮುಖಂಡ ಸ್ವತಂತ್ರ ದೇವ್ ಸಿಂಗ್ ಅವರು ರವಿವಾರ  ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟಕ್ಕೆ  ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಅವರ ರಾಜೀನಾಮೆ ಅಂಗೀಕಾರವಾಗಿದೆ.

ಸಿಂಗ್ ಅವರನ್ನು ಜುಲೈನಲ್ಲಿ ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷರಾಗಿ ನೇಮಿಸಲಾಗಿತ್ತು.   ಬಿಜೆಪಿಯ ‘ಒನ್ ಮ್ಯಾನ್ ಒನ್ ಪೋಸ್ಟ್’ ತತ್ವಕ್ಕೆ ಅನುಗುಣವಾಗಿ ಸ್ವತಂತ್ರದೇವ್ ಸಿಂಗ್  ರಾಜೀನಾಮೆ ನೀಡಿದ್ದಾರೆ

 ಉತ್ತರ ಪ್ರದೇಶ ಕ್ಯಾಬಿನೆಟ್‌ನಲ್ಲಿ ಈಗ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ 42 ಸದಸ್ಯರಿದ್ದಾರೆ. ಸಿಂಗ್ ಯುಪಿ  ಸಚಿವ ಸಂಪಟದಲ್ಲಿ  ಸಾರಿಗೆ ಸಚಿವರಾಗಿದ್ದರು.

  ಉತ್ತರಪ್ರದೇಶದಲ್ಲಿ ನಡೆದ 2017 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಗಳ ಉಸ್ತುವಾರಿ ವಹಿಸಿದ್ದರು.

 ಎರಡನೇ ಬಾರಿ ಎಂಎಲ್ ಸಿ ಆಗಿರುವ ಅವರು  ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು 'ಶಕ್ತಿ ಬೂತ್' ನ ಉಸ್ತುವಾರಿ ವಹಿಸಿದ್ದರು. 2019 ರ ಲೋಕಸಭಾ ಚುನಾವಣೆಗೆ ಮುನ್ನ ಸಿಂಗ್ ಅವರಿಗೆ  ಮಧ್ಯಪ್ರದೇಶದ ಉಸ್ತುವಾರಿ ವಹಿಸಿಕೊಡಲಾಗಿತ್ತು.

 ಉತ್ತರ ಪ್ರದೇಶದ ಮಿರ್ಜಾಪುರ ಸಿಂಗ್ ರಾಜ್ಯದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಕೆಲಸ ಮಾಡುವ ಮೂಲಕ ರಾಜಕೀಯ ನಾಯಕನಾಗಿ ಹೆಸರು ಗಳಿಸಿದ್ದಾರೆ.. 2012 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶದ ಜಲಾನ್ ಜಿಲ್ಲೆಯ ಒರೈ ಅಸೆಂಬ್ಲಿ ಸ್ಥಾನದಿಂದ ಸ್ಪರ್ಧಿಸಿದ್ದರು. ಆದರೆ ಅವರು ಚುನಾವಣೆಯಲ್ಲಿ ಜಯ ಗಳಿಸುವಲ್ಲಿ  ವಿಫಲರಾಗಿದ್ದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)