varthabharthi

ರಾಷ್ಟ್ರೀಯ

ಶೆಹ್ಲಾ ರಶೀದ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ವಕೀಲನಿಂದ ದೂರು

ವಾರ್ತಾ ಭಾರತಿ : 19 Aug, 2019

ಹೊಸದಿಲ್ಲಿ, ಆ.19: ಭಾರತೀಯ ಸೇನೆ ಹಾಗೂ ಸರಕಾರದ ವಿರುದ್ಧ ನಕಲಿ ಸುದ್ದಿ ಹರಡುತ್ತಿದ್ದಾರೆಂದು ಹೋರಾಟಗಾರ್ತಿ ಹಾಗೂ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ವಿರುದ್ಧ ಆರೋಪ ಹೊರಿಸಿರುವ ಸುಪ್ರೀಂ ಕೋರ್ಟ್ ವಕೀಲ ಅಲಖ್ ಅಲೋಕ್ ಶ್ರೀವಾತ್ಸವ ಶೆಹ್ಲಾ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಅವರ ಕೃತ್ಯ  ಐಪಿಸಿಯ ಸೆಕ್ಷನ್ 124 ಎ ಅನ್ವಯ ದೇಶದ್ರೋಹದ ಅಪರಾಧವಾಗುತ್ತದೆ ಎಂದೂ ದೂರುದಾರ  ಆರೋಪಿಸಿದ್ದಾರೆ.

ಜಮ್ಮು ಕಾಶ್ಮೀರ ಹಾಗೂ ದೇಶದ ಇತರೆಡೆಗಳಲ್ಲಿ ಹಿಂಸೆಯನ್ನು ಉದ್ರೇಕಿಸುವ ಸಲುವಾಗಿ ಶೆಹ್ಲಾ ರಶೀದ್ ಆವರು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಆಕೆಯ ಟ್ವೀಟ್ ಗಳನ್ನು  ಹಲವು ಟ್ವಿಟರಿಗರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಶೇರ್ ಮಾಡುತ್ತಿರುವುದರಿಂದ ಅದು ಭಾರತದ  ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದೆ ಎಂದೂ ಅವರು ದೂರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)