varthabharthi

ರಾಷ್ಟ್ರೀಯ

ಜಮ್ಮುವಿನ ತಾವಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ

ವಾರ್ತಾ ಭಾರತಿ : 19 Aug, 2019

ಶ್ರೀನಗರ, ಆ.19: ಜಮ್ಮುವಿನ ತಾವಿ ನದಿಯಲ್ಲಿ ಸೋಮವಾರ ಮಧ್ಯಾಹ್ನ  ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ  ಇಬ್ಬರನ್ನು ಸೇನೆ ಕಾರ್ಯಾಚರಣೆಯ ಮೂಲಕ ಪಾರು ಮಾಡಿದೆ.

ನಿರ್ಮಾಣ ಹಂತದಲ್ಲಿರುವ ಜಮ್ಮುವಿನ ಸೇತುವೆಯ ಬಳಿ   ಮೀನು ಹಿಡಿಯಲು ತೆರಳಿದ್ದ ನಾಲ್ವರು   ನದಿಯಲ್ಲಿ ಏಕಾಏಕಿ ಪ್ರವಾಹ ಏರಿಕೆಯಾದ ಹಿನ್ನೆಲೆಯಲ್ಲಿ ಸಿಲುಕಿಕೊಂಡರು ಎನ್ನಲಾಗಿದೆ.

ಈ ಪೈಕಿ ಇಬ್ಬರು ಈಜಿ ನದಿಯ ದಡ ಸೇರಿದರು. ಆದರೆ  ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ   ಇಬ್ಬರನ್ನು ಕಾರ್ಯಾಚರಣೆ ನಡೆಸಿದ ಭಾರತದ ವಾಯು  ಸೇನೆ  ಹೆಲಿಕಾಪ್ಟರ್  ಬಳಸಿ  ಪಾರು ಮಾಡಿದೆ ಎಂದು ತಿಳಿದು ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)