varthabharthi

ಅಂತಾರಾಷ್ಟ್ರೀಯ

ಪಾಕ್ ಸೇನಾ ಮುಖ್ಯಸ್ಥರ ಅವಧಿ 3 ವರ್ಷ ವಿಸ್ತರಿಸಿದ ಇಮ್ರಾನ್

ವಾರ್ತಾ ಭಾರತಿ : 19 Aug, 2019

 ಇಸ್ಲಾಮಾಬಾದ್, ಆ. 19: ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜವೇದ್ ಬಾಜ್ವರ ಸೇವಾವಧಿಯನ್ನು ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಮೂರು ವರ್ಷಗಳ ಅವಧಿಗೆ ವಿಸ್ತರಿಸಿದ್ದಾರೆ.

‘‘ಪ್ರಾದೇಶಿಕ ಭದ್ರತಾ ಪರಿಸ್ಥಿತಿ’’ಯನ್ನು ಗಮನದಲ್ಲಿಟ್ಟುಕೊಂಡು ಸೇನಾ ಮುಖ್ಯಸ್ಥರನ್ನು ಸೇವೆಯಲ್ಲಿ ಮುಂದುವರಿಸುವ ಆದೇಶವನ್ನು ಇಮ್ರಾನ್ ಹೊರಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಭಾವಿಸಲಾಗಿದೆ.

ಜನರಲ್ ಬಾಜ್ವರ ಹಾಲಿ ಸೇವಾವಧಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿತ್ತು.

‘‘ಜನರಲ್ ಕಮರ್ ಜಾವೇದ್ ಬಾಜ್ವರ ಹಾಲಿ ಸೇವಾವಧಿ ಪೂರ್ಣಗೊಂಡ ದಿನಾಂಕದಿಂದ ಇನ್ನೊಂದು ಮೂರು ವರ್ಷಗಳ ಅವಧಿಗೆ ಅವರ ಸೇವೆಯನ್ನು ವಿಸ್ತರಿಸಲಾಗಿದೆ’’ ಎಂದು ಇಮ್ರಾನ್ ಖಾನ್ ಹೊರಡಿಸಿದ ಆದೇಶ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)