varthabharthi

ಕರಾವಳಿ

ಆ.21ರಂದು ವಿಟ್ಲದಲ್ಲಿ ‘ಸಾಧಕರೊಂದಿಗೆ ನಾವು’ ಕಾರ್ಯಕ್ರಮ

ವಾರ್ತಾ ಭಾರತಿ : 20 Aug, 2019

ವಿಟ್ಲ, ಆ.20: ವಿಟ್ಲ ರೋಟರಿ ಕ್ಲಬ್, ವಿಠಲ ವಿದ್ಯಾ ಸಂಘದ ವತಿಯಿಂದ ಮಂಗಳೂರು ಪ್ಯಾರಡೈಸ್ ಸಹಯೋಗದೊಂದಿಗೆ ‘ಸಾಧಕರೊಂದಿಗೆ ನಾವು’ ಕಾರ್ಯಕ್ರಮವು ಆ.21ರಂದು ಅಪರಾಹ್ನ 2 ಗಂಟೆಗೆ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ.

ರಸ್ತೆ ಬದಿ ಅಲೆದಾಡುವ ಅಶಕ್ತರ ಬಾಳಿಗೆ ಬೆಳಕಾದ ತಲಪಾಡಿ 'ಸ್ನೇಹಾಲಯ' ಸಂಸ್ಥೆಯ ಸ್ಥಾಪಕ ಜೋಸೆಫ್ ಕ್ರಾಸ್ತಾ, ಕಿತ್ತಳೆ ಹಣ್ಣು ಮಾರಿ ತನ್ನೂರಲ್ಲಿ ಶಾಲೆ ಕಟ್ಟಿಸಿದ 'ಅಕ್ಷರ ಸಂತ' ಹರೇಕಳ ಹಾಜಬ್ಬ, ಸಾವಿನ ಕದತಟ್ಟಿ ಮತ್ತೆ ಜೀವನಾರಂಭಿಸಿ 'ಹಳ್ಳಿಮನೆ ರೊಟ್ಟೀಸ್' ಉದ್ಯಮಿಯಾದ ಶಿಲ್ಪಾ ಭಾಗವಹಿಸಿ ತಮ್ಮ ಅನುಭವಗಾಥೆಯನ್ನು ತೆರೆದಿಡುವರು. ಇದೇ ಸಂದರ್ಭ ಅವರನ್ನು ಗೌರವಿಸಲಾಗುವುದು.

ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ ಅಧ್ಯಕ್ಷತೆ ವಹಿಸುವರು. ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಸಂಚಾಲಕ ಎಲ್.ಎನ್.ಕೂಡೂರು, ರೋಟರಿ ವಲಯ ಉಪಗವರ್ನರ್ ರಿತೇಶ್ ಬಾಳಿಗಾ, ರೋಟರಿ ವಲಯ ಸೇನಾನಿ ಸಂಜೀವ ಎಂ., ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಭಾಗವಹಿಸುವರು ಎಂದು ಕಾರ್ಯಕ್ರಮದ ಸಂಯೋಜಕ ರಶೀದ್ ವಿಟ್ಲ ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ಅಣ್ಣಪ್ಪ ಸಾಸ್ತಾನ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)