varthabharthi

ರಾಷ್ಟ್ರೀಯ

ಹಾಸಿಗೆಯಿಲ್ಲ ಎಂದ ವೈದ್ಯರು: ಆಸ್ಪತ್ರೆಯ ಕಾರಿಡಾರ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ವಾರ್ತಾ ಭಾರತಿ : 20 Aug, 2019

Photo: www.ndtv.com

ಫಾರೂಖಾಬಾದ್, ಆ.20: ಹಾಸಿಗೆಯಿಲ್ಲ ಎಂದು ವೈದ್ಯರು ಮತ್ತು ಸಿಬ್ಬಂದಿ ಹೇಳಿದ ಕಾರಣ ಗರ್ಭಿಣಿಯೊಬ್ಬರು ಆಸ್ಪತ್ರೆಯ ಕಾರಿಡಾರ್ ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಫಾರೂಖಾಬಾದ್ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಘಟನೆಯ ವಿಡಿಯೋವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದು, ಇದು ವೈರಲ್ ಆದ ನಂತರ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯು ಕಾರಿಡಾರ್ ನಲ್ಲಿ ಮಲಗಿದ್ದು, ಸುತ್ತಮುತ್ತ ರಕ್ತ ತುಂಬಿದೆ. ಕಾರಿಡಾರ್ ನ ಇನ್ನೊಂದು ಮೂಲೆಯಲ್ಲಿ ನವಜಾತ ಶಿಶುವನ್ನು ಮಲಗಿಸಿರುವ ದೃಶ್ಯಗಳು ವಿಡಿಯೋದಲ್ಲಿದೆ.

ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯನ್ನು ಲೇಬರ್ ಕೋಣೆಗೆ ವೈದ್ಯರು ಕರೆದೊಯ್ದಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)