ಮಂಗಳೂರು: ಅದ್ವೈತ್ ಹುಂಡೈ ನ್ಯೂ ‘ಗ್ರ್ಯಾಂಡ್ ನಿಯೋಸ್’ ಕಾರು ಮಾರುಕಟ್ಟೆಗೆ
ಮಂಗಳೂರು, ಆ.20: ನಗರದ ಕುಂಟಿಕಾನದಲ್ಲಿರುವ ಅದ್ವೈತ್ ಹುಂಡೈ ಶೋರೂಂನಲ್ಲಿ ಹುಂಡೈ ನ್ಯೂ ಗ್ರ್ಯಾಂಡ್ ನಿಯೋಸ್ ಕಾರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ನೂತನ ಕಾರಿಗೆ ತುಳು ಚಿತ್ರನಟ ಭೋಜರಾಜ್ ವಾಮಂಜೂರ್, ನಿವೃತ್ತ ಕರ್ನಲ್ ಶರತ್ ಭಂಡಾರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕರ್ನಲ್, ಹುಂಡೈ ಸಂಸ್ಥೆಯು ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಕಾರುಗಳನ್ನು ನೀಡುತ್ತಿದೆ. ನಾನು ಈ ಸಂಸ್ಥೆಯಿಂದ ಈವರೆಗೂ ಕಾರು ಖರೀದಿಸಿಲ್ಲ. ಕಾರು ಖರೀದಿಸುವ ಯೋಜನೆ ಹಾಕಿದ್ದು, ಶೀಘ್ರದಲ್ಲೇ ಯೋಜನೆ ಫಲಿಸಲಿದೆ. ಇದೇ ಶೋರೂಂನಿಂದ ಕಾರು ಖರೀದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅದ್ವೈತ್ ಹ್ಯುಂಡೈನ ಕ್ಲಸ್ಟರ್ ಹೆಡ್ ಶಶಿಕಾಂತ್ ಶೆಟ್ಟಿ, ಬ್ಯಾಂಚ್ ಮ್ಯಾನೇಜರ್ ಶಿವಪ್ರಸಾದ್, ಅಕೌಂಟ್ಸ್ ಮ್ಯಾನೇಜರ್ ಸುಧಾಕರ್, ಶೋ ರೋಂ ಮ್ಯಾನೇಜರ್ ರಾಜೇಶ್ ಉಳ್ಳಾಲ್, ಅಡ್ವಾಂಟೇಜ್ ಮ್ಯಾನೇಜರ್ ಸತೀಶ್ ಕೆ., ಬಾಡಿಶಾಪ್ ಮ್ಯಾನೇಜರ್ ರಾಘವೇಂದ್ರ, ಸೇಲ್ಸ್ ಮ್ಯಾನೇಜರ್ಗಳಾದ ಹರ್ಷರಾಜ್, ಮೀನಾ ರೇಗೊ ಹಾಗೂ ಸರ್ವಿಸ್ ಮ್ಯಾನೇಜರ್ ಸುಕೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಪ್ರಾರ್ಥಿಸಿದರು. ರಾಜೇಶ್ ಉಳ್ಳಾಲ್ ಸ್ವಾಗತಿಸಿದರು. ಶಿವಪ್ರಸಾದ್ವಂದಿಸಿದರು. ಸತೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು.
ವಿಶೇಷತೆ: ನ್ಯೂ ಗ್ರ್ಯಾಂಡ್ ನಿಯಾಸ್ನಲ್ಲಿ ಇಂಜಿನ್ ಅಪ್ಶನ್ ಹೊಂದಿದೆ. ಅದರಲ್ಲಿ 1.2 ಲೀಟರ್ ಪೆಟ್ರೋಲ್ ಮ್ಯಾನವಲ್ ಮತ್ತು ಅಟೋಮ್ಯಾಟಿಕ್ ಲಭ್ಯವಿದೆ. ಅದೇರೀತಿ 1.2 ಲೀಟರ್ ಡಿಸೇಲ್ನಲ್ಲಿ ಮ್ಯಾನುವಲ್ ಮತ್ತು ಅಟೋಮಾಟಿಕ್ ವ್ಯವಸ್ಥೆಯಿದೆ.
ಫ್ರಂಟ್ ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಮತ್ತು ಪ್ರೊಜೆಕ್ಟರ್ ಟೈಪ್ ಫಾಗ್ ಲ್ಯಾಂಪ್ ಮತ್ತು ವಿನೂತನ ಶೈಲಿಯ ಬೂಮರಿಂಗ್ ಡಿಆರ್ಎಲ್ ಹೊಂದಿದೆ. 15 ಇಂಚಿನ ಡೈಮಂಡ್ ಕಟ್ಅಲಾಯ್ ವೀಲ್ಸ್, ಪ್ರೀಮಿಯಮ್ ಕ್ರೋಮ್ಡೋರ್ ಹ್ಯಾಂಡಲ್ಸ್ 5.3 ಡಿಜಿಟಲ್ ಸ್ಪೀಡ್ ಮೀಟರ್ ವಿದ್ ಎಂ.ಐಡಿ, 8 ಇಂಚಿನ ಟಚ್ ಸ್ಕ್ರೀನ್ನೊಂದಿಗೆ ಅಡ್ರೋಯ್ಡೋ ಅಟೋ ಆ್ಯಪಲ್ಕಾರ್ ಪ್ಲೇ ಮತ್ತು ಮಿರರ್ ಅಂಕ್ ಆರ್ಕಮಿಸ್ ಸೌಂಡ್ ಮೋಡ್ ವ್ಯವಸ್ಥೆಯನ್ನು ಒಳಗೊಂಡಿದೆ.
ಇನ್ನು ವೈಯರ್ಲೆಸ್ ಚಾರ್ಜರ್, ಇಕೋ ಕೋಟಿಂಗ್ ಶೇ.65ರಷ್ಟು ಅಡ್ವಾನ್ಸ್ಡ್ ಹೈ ಸ್ಟ್ರೆಂಗ್ ಸ್ಟೀಲ್ ಮತ್ತು ಎರಡು ಆರ್ಬ್ಯಾಗ್ಗಳಿವೆ. ಅಲ್ಲದೆ, ಎ.ಬಿ.ಎಸ್ ಜತೆಗೆ ಎ.ಬಿ.ಡಿ ಸೌಲಭ್ಯವಿದೆ. ಇನ್ನು ಹಲವು ಅತ್ಯಾಧುನಿಕ ವಿನೂತನ, ಫೀಚರ್ಗಳನ್ನು ನೂತನ ಗ್ರಾಂಡ್ ನಿಯೋಸ್ ಹೊಂದಿದೆ.