varthabharthi

ನಿಧನ

ನಿಸಾರ್ ಅಹ್ಮದ್

ವಾರ್ತಾ ಭಾರತಿ : 20 Aug, 2019

ಪುತ್ತೂರು: ಪುತ್ತೂರು ತಾ.ಪಂ. ಹಾಗೂ ನಗರ ಸಭೆಯ ಮಾಜಿ ಸದಸ್ಯೆ ಝೊಹರಾ ನಿಸಾರ್ ಅವರ ಪತಿ ನಗರದ ಸಾಮೆತ್ತಡ್ಕ ನಿವಾಸಿ ನಿಸಾರ್ ಅಹ್ಮದ್ (58) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ತನ್ನ ಪುತ್ರಿಯ ಮನೆಯಲ್ಲಿ ಮಂಗಳವಾರ ನಿಧನರಾದರು.

ಮೂಲತ: ಉಪ್ಪಿನಂಗಡಿ ನಿವಾಸಿಯಾಗಿದ್ದ ನಿಸಾರ್  ಅವರು ಮೆಕಾನಿಕಲ್ ಇಂಜಿನಿಯರ್ ಆಗಿದ್ದು ವಿದೇಶದಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಛತ್ತೀಸ್‍ಘಡದಲ್ಲಿನ ವಿದ್ಯುತ್ ತಯಾರಿಕಾ ಸಂಸ್ಥೆಯಲ್ಲಿ ಸೇವೆ ನಡೆಸುತ್ತಿದ್ದರು.  ಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ಸ್ವಯಂ ನಿವೃತ್ತಿ ಹೊಂದಿದ್ದ ಅವರು ಪುತ್ತೂರಿನ ತನ್ನ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿನ ಜೆಪಿ ನಗರದಲ್ಲಿರು ತನ್ನ ಪುತ್ರಿಯ ಮನೆಗೆ ಹೋಗಿದ್ದ ಅವರು ಅಲ್ಲಿ ನಿಧನರಾಗಿದ್ದಾರೆ.

ಮೃತರು ತಾಯಿ, ಪತ್ನಿ, ಪುತ್ರಿ, ಅಳಿಯ, ಮೊಮ್ಮಗ ಹಾಗೂ ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ನಡೆಯಿತು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)