varthabharthi

ರಾಷ್ಟ್ರೀಯ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಗೌರ್ ನಿಧನ

ವಾರ್ತಾ ಭಾರತಿ : 21 Aug, 2019

 ಭೋಪಾಲ್, ಆ.21: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಾಬುಲಾಲ್ ಗೌರ್ ಇಂದು ಬೆಳಗ್ಗೆ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ದೀರ್ಘಕಾಲದ ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ.

89 ವಯಸ್ಸಿನ ಬಾಬುಲಾಲ್ ಗೌರ್ ಹೃದಯಾಘಾತದಿಂದ ನಿಧನರಾದರೆಂದು ನರ್ಮದಾ ಆಸ್ಪತ್ರೆಯ ನಿರ್ದೇಶಕ ಡಾ.ರಾಜೇಶ್ ಶರ್ಮಾ ಸುದ್ದಿ ಏಜೆನ್ಸಿ ಪಿಟಿಐಗೆ ತಿಳಿಸಿದ್ದಾರೆ.

ಹಿರಿಯ ಬಿಜೆಪಿ ನಾಯಕ ಗೌರ್ 2004ರಿಂದ 2005ರ ತನಕ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಗೋವಿಂದಪುರ ವಿಧಾನಸಭಾ ಕ್ಷೇತ್ರವನ್ನು 10 ಬಾರಿ ಪ್ರತಿನಿಧಿಸಿದ್ದರು.

1930ರ ಜೂ.2ರಂದು ಉತ್ತರಪ್ರದೇಶದ ಪ್ರತಾಪ್‌ಗಢದಲ್ಲಿ ಜನಿಸಿದ್ದ ಬಾಬುಲಾಲ್ ಗೌರ್ ಆರಂಭದಲ್ಲಿ ವ್ಯಾಪಾರ ಸಂಘಟನೆಯ ನಾಯಕ ಹಾಗೂ ಶಾಸಕನಾಗಿದ್ದು, ಬಳಿಕ ಮಧ್ಯಪ್ರದೇಶದ ಪ್ರಭಾವಶಾಲಿ ಹಾಗೂ ಜನಪ್ರಿಯ ನಾಯಕನಾಗಿ ಬೆಳೆದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)