varthabharthi

ರಾಷ್ಟ್ರೀಯ

ಮಹಾರಾಷ್ಟ್ರ ಸರಕಾರದ 32,000 ಹುದ್ದೆಗಳಿಗೆ 32 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ

ವಾರ್ತಾ ಭಾರತಿ : 21 Aug, 2019

ಮುಂಬೈ : ಮಹಾರಾಷ್ಟ್ರ ಸರಕಾರದ ಒಟ್ಟು 31,888 ಖಾಲಿ ಹುದ್ದೆಗಳಿಗೆ ಬರೋಬ್ಬರಿ 32 ಲಕ್ಷ ಅಭ್ಯರ್ಥಿಗಳಿಂದ ಅರ್ಜಿಗಳು ಬಂದಿದ್ದು ಒಂದು ಹುದ್ದೆಗೆ ಕನಿಷ್ಠ 100 ಮಂದಿ ಅರ್ಜಿ ಸಲ್ಲಿಸಿದಂತಾಗಿದೆ.

ಒಟ್ಟು ಅರ್ಜಿದಾರರ ಪೈಕಿ ಮೂರನೇ ಒಂದಂಶದಷ್ಟು ಮಂದಿ, ಅಂದರೆ 11.2 ಲಕ್ಷ ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ 13,514 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವಾರಾಗಿದ್ದಾರೆ. ಪಶುಸಂಗೋಪನಾ ಇಲಾಖೆಯಲ್ಲಿ ಸಹಾಯಕರು ಹಾಗೂ  ಮೇಲ್ವಿಚಾರಕರ  729 ಹುದ್ದೆಗಳಿಗೆ  ಒಟ್ಟು 3.3 ಲಕ್ಷ ಅರ್ಜಿಗಳು ಬಂದಿವೆ, ಪ್ರತೀ ಹುದ್ದೆಗೆ 452 ಅಭ್ಯರ್ಥಿಗಳಿದ್ದಂತಾಗಿದೆ.

ಸರಕಾರದ 13 ಇಲಾಖೆಗಳ 31,888 ಖಾಲಿ ಹುದ್ದೆಗಳಲ್ಲಿ ಹೆಚ್ಚಿನವು ಮೂರನೇ ಮತ್ತು ನಾಲ್ಕನೇ ದರ್ಜೆ ಸಿಬ್ಬಂದಿಯ ಹುದ್ದೆಗಳಾಗಿವೆ. ಅರಣ್ಯ ರಕ್ಷಕರ ಹುದ್ದೆಗಳಿಗೂ ಬೇಡಿಕೆಯಿದ್ದ ಪ್ರತಿ ಹುದ್ದೆಗೆ ಸರಾಸರಿ 448 ಅಭ್ಯರ್ಥಿಗಳಿದ್ದಾರೆ.  ಅರಣ್ಯ ಇಲಾಖೆಯ 900 ಖಾಲಿ ಹುದ್ದೆಗಳಿಗೆ 4 ಲಕ್ಷ ಅರ್ಜಿಗಳು ಬಂದಿವೆ. ಕಂದಾಯ ಇಲಾಖೆಯ 1,802 ಕಂದಾಯ ಅಧಿಕಾರಿಗಳ ಹುದ್ದೆಗಳಿಗೆ 5.6 ಲಕ್ಷ ಅರ್ಜಿಗಳು, ಆರೋಗ್ಯ ಇಲಖೆಯ 5,778 ಹುದ್ದೆಗಳಿಗೆ 4.2 ಲಕ್ಷ ಅರ್ಜಿಗಳು ಹಾಗೂ ವಿತ್ತ ಇಲಾಖೆಯ 932 ಹುದ್ದೆಗಳಿಗೆ 1.74 ಲಕ್ಷ ಅರ್ಜಿಗಳು ಬಂದಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)