ಚಿದಂಬರಂ ನಿವಾಸದ ಮುಂದೆ ಪೊಲೀಸರು, ಈಡಿ, ಸಿಬಿಐ ಅಧಿಕಾರಿಗಳು: ಶೀಘ್ರ ಬಂಧನ ಸಾಧ್ಯತೆ
ಹೊಸದಿಲ್ಲಿ, ಆ.21: ಸುದ್ದಿಗೋಷ್ಠಿ ಕೊನೆಗೊಂಡ ಕೆಲ ನಿಮಿಷಗಳಲ್ಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ ನಿವಾಸಕ್ಕೆ ಆಗಮಿಸಿದ್ದು, ಸದ್ಯದಲ್ಲೇ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿದಂಬರಂ ನಿವಾಸಕ್ಕೆ ಸಿಬಿಐ, ಈಡಿ ಅಧಿಕಾರಿಗಳು ಮಾತ್ರವಲ್ಲದೆ, 20 ದಿಲ್ಲಿ ಪೊಲೀಸರು ಆಗಮಿಸಿದ್ದಾರೆ. ಕಾಂಗ್ರೆಸ್ ನಾಯಕನ ಮನೆ ಮುಂದೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿದ್ದಾರೆ.
Next Story