varthabharthi

ನಿಧನ

ವಸಂತರಾವ್ ನೆಲ್ಲಿಮಾರ್

ವಾರ್ತಾ ಭಾರತಿ : 21 Aug, 2019

ಮೂಡುಬಿದಿರೆ: ಹಿರಿಯ ಜವುಳಿ ಉದ್ಯಮಿ ವಸಂತ ರಾವ್ ನೆಲ್ಲಿಮಾರ್ (66 ) ಅಲ್ಪಕಾಲದ ಅಸ್ವಾಸ್ಥ್ಯದಿಂದ  ಬುಧವಾರ ತಮ್ಮ ಜಯದೇವ ಕೃಪಾ ನಿವಾಸದಲ್ಲಿ ನಿಧನ ಹೊಂದಿದರು.

ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಳೆದ 38 ವರ್ಷಗಳಿಂದ ಮೂಡುಬಿದಿರೆ ಮಾರುಕಟ್ಟೆ ಸಂಕೀರ್ಣದಲ್ಲಿ  ವಸಂತ ಟೆಕ್ಸ್ ಟೈಲ್ಸ್ ಜವುಳಿ ಸಂಸ್ಥೆಯನ್ನು ಮುನ್ನಡೆಸಿದ್ದರು. ಕಲಾ ಪೋಷಕರಾಗಿ, ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಂಡಿದ್ದ ವಸಂತರಾವ್ ದಕ ಜಿಲ್ಲಾ ಜವುಳಿ ವರ್ತಕರ ಸಂಘದಲ್ಲೂ ಗುರುತಿಸಿಕೊಂಡಿದ್ದರು. ಅವರು ಯಕ್ಷಗಾನ ಸಂಘಟಕ ಸದಾಶಿವ ನೆಲ್ಲಿಮಾರ್ ಅವರ ಹಿರಿಯ ಸಹೋದರ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)