varthabharthi

ಗಲ್ಫ್ ಸುದ್ದಿ

ನೂರುಲ್ ಹುದಾ ನೈಫ್ ಕ್ಲಸ್ಟರ್ ವಾರ್ಷಿಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 22 Aug, 2019

ದುಬೈ :  ದಾರುಲ್ ಹುದಾ ಚೆಮ್ಮಾಡ್ ಇದರ ಕರ್ನಾಟಕದ ಅಂಗ ಸಂಸ್ಥೆಯಾದ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ದುಬೈ ಸಮಿತಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೈಫ್ ಕ್ಲಸ್ಟರ್ ಸಮಿತಿಯ ವಾರ್ಷಿಕ ಸಭೆ ಮತ್ತು ಸಮಿತಿ ನವೀಕರಣ ಸಭೆಯು ದೇರಾ ನೈಫ್ ರೋಡ್ ನ ಸುಹೈಲ್ ಮೂಸ ರೆಸ್ಟೋರೆಂಟ್ ನಲ್ಲಿ  ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ನೂರುಲ್ ಹುದಾ ನೈಫ್  ಸಮಿತಿಯ ಉಪಾಧ್ಯಕ್ಷ ಉಸ್ಮಾನ್ ಮರೀಲ್ ವಹಿಸಿದ್ದರು. ಕಾರ್ಯದರ್ಶಿ ಅಝೀಝ್ ಸೋಂಪಾಡಿ ವಾರ್ಷಿಕ ವರದಿ ವಾಚಿಸಿದರು. ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸತ್ಕರ್ಮಗಳನ್ನು ಅಧಿಕಗೊಳಿಸಬೇಕು ಎಂದು ಹೇಳಿ, ಪವಿತ್ರ ಕುರ್ ಆನ್ ಸೂಕ್ತದೊಂದಿಗೆ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಅನ್ವರ್ ಮಣಿಲ ಚುನಾವಣಾ ಅಧಿಕಾರಿಯಾಗಿ ನೈಫ್ ಕ್ಲಸ್ಟರ್ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.

ನೂರುಲ್ ಹುದಾ ನೈಫ್ ಕ್ಲಸ್ಟರ್ ಪದಾಧಿಕಾರಿಗಳ ವಿವರ :

ಸಲಹೆಗಾರರಾಗಿ ಸುಲೈಮಾನ್ ಮೌಲವಿ ಕಲ್ಲೆಗ, ಗೌರವಾಧ್ಯಕ್ಷರಾಗಿ ಅಬ್ದುಲ್ ಸಲಾಮ್ ಬಪ್ಪಲಿಗೆ, ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಪೆರಾಜೆ, ಉಪಾಧ್ಯಕ್ಷರಾಗಿ ಉಮ್ಮರ್ ಮಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಮರೀಲ್, ಕೋಶಾಧಿಕಾರಿಯಾಗಿ ಇಫ್ತಿಕಾರ್ ಕಣ್ಣೂರು, ಕಾರ್ಯದರ್ಶಿಗಳಾಗಿ ಶಾಹುಲ್ ಬಿ.ಸಿ. ರೋಡ್, ಫಾರೂಕ್ ಕಲ್ಲೆಗ, ಸಂಚಾಲಕರಾಗಿ ಅಬ್ಬಾಸ್ ಕೇಕುಡೆ, ಅಶ್ರಫ್ ಪರ್ಲಡ್ಕ, ಬದ್ರುದ್ದೀನ್ ಹೆಂತಾರ್, ರಫೀಕ್ ಆತೂರು, ಆಸಿಫ್ ಮರೀಲ್, ನವಾಝ್ ಬಿಸಿ ರೋಡ್, ನಾಸಿರ್ ಬಪ್ಪಲಿಗೆ, ಜಾಬಿರ್ ಬಪ್ಪಲಿಗೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶರೀಫ್ ಕಟ್ಟತ್ತಾರ್, ಇಲ್ಯಾಸ್ ಕಡಬ, ಅನ್ಸಾಫ್ ಪಾತೂರು, ರಝಾಕ್ ಉಸ್ತಾದ್ ಪಾತೂರು, ರಫೀಕ್ ಕೊಡಗು, ಅಬೂಬಕರ್ ಬಜಾಲ್, ಸಿರಾಜ್ ಬಂಟ್ವಾಳ, ಬಾತಿಷ ಪರ್ಲಡ್ಕ ಇವರುಗಳನ್ನು ಆರಿಸಲಾಯಿತು.

ರಾಷ್ಟ್ರೀಯ ಸಮಿತಿ ಅಧ್ಯಕ್ಷ ಶರೀಫ್ ಕಾವುರ್ ನೂತನ ಸಮಿತಿಗೆ ಶುಭ ಹಾರೈಸಿ,  ಮಾತನಾಡಿದರು. ಯುಎಇ ಸಮಿತಿ ಕಾರ್ಯಾಧ್ಯಕ್ಷ ಅಶ್ರಫ್ ಪರ್ಲಡ್ಕ, ದುಬೈ ಸಮಿತಿಯ ಪ್ರಮುಖರಾದ ಅಬ್ಬಾಸ್ ಕೇಕುಡೆ, ಆಸಿಫ್ ಮರೀಲ್, ನವಾಝ್ ಬಿಸಿ ರೋಡ್, ಇಫ್ತಿಕಾರ್ ಕಣ್ಣೂರು, ಶಾಹುಲ್ ಬಿಸಿ ರೋಡ್, ರಹಿಮಾನ್ ಪೆರಾಜೆ ಮೊದಲಾದವರು ಮಾತನಾಡಿ, ನೂತನ ಸಮಿತಿಗೆ ಶುಭ ಹಾರೈಸಿದರು.

ನೂರುಲ್ ಹುದಾ ದುಬೈ ಸಮಿತಿಯ ಕಾರ್ಯದರ್ಶಿ ಅಝೀಝ್ ಸೋಂಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)