varthabharthi


ಸಿನಿಮಾ

ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ‘ಫೋರ್ಬ್ಸ್’ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಗೆ 4ನೇ ಸ್ಥಾನ

ವಾರ್ತಾ ಭಾರತಿ : 22 Aug, 2019

ನ್ಯೂಯಾರ್ಕ್: ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜೀನ್  2019ರ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ನಟರ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ  65 ಮಿಲಿಯನ್ ಅಮೆರಿಕನ್ ಡಾಲರ್  ಗಳಿಕೆಯೊಂದಿಗೆ (ಅಂದಾಜು ರೂ. 446 ಕೋಟಿ) ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಲಿವುಡ್ ನಟ, ‘ದಿ ರಾಕ್’ ಎಂದೇ ಖ್ಯಾತರಾದ ಡ್ವಾಯ್ನೆ ಜಾನ್ಸನ್ ಅವರಿಗೆ ಹೋಗಿದ್ದು ಅವರ ಗಳಿಕೆ  89.4 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ (ಅಂದಾಜು ರೂ. 640 ಕೋಟಿ).

‘ಮಿಷನ್ ಮಂಗಲ್’ ಯಶಸ್ಸಿನಿಂದ ಬೀಗುತ್ತಿರುವ ಅಕ್ಷಯ್ ಕುಮಾರ್, ಈ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಹತ್ತು ಮಂದಿಯಲ್ಲಿ ಸ್ಥಾನ ಪಡೆದ ಏಕೈಕ ಬಾಲಿವುಡ್ ನಟರಾಗಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಟಾಪರ್ ಆಸ್ಟ್ರೇಲಿಯಾದ ನಟ ಕ್ರಿಸ್ ಹೆಮ್ಸ್ ವರ್ತ್ (76.4 ಮಿಲಿಯನ್ ಅಮೆರಿಕನ್ ಡಾಲರ್ -ಅಂದಾಜು ರೂ. 547 ಕೋಟಿ) ಅವರಿಗೆ ಹೋಗಿದ್ದರೆ ಜಾಕಿ ಚಾನ್ ಅವರು ತಮ್ಮ 58 ಮಿಲಿಯನ್ ಯುಎಸ್ ಡಾಲರ್ ಗಳಿಕೆಯೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ಒಂಬತ್ತನೇ ಹಾಗೂ ಹತ್ತನೇ ಸ್ಥಾನ ಪೌಲ್ ರುಡ್ಡ್ ಹಾಗೂ ವಿಲ್ ಸ್ಮಿತ್ ಅವರಿಗೆ ಕ್ರಮವಾಗಿ ಹೋಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)