ಗುಡ್ಡ ಕುಸಿದ ತೋರಾದಲ್ಲಿ ಮತ್ತೊಂದು ಶವ ಪತ್ತೆ
ಮಡಿಕೇರಿ, ಆ.22 : ಮಹಾಮಳೆಯಿಂದ ಆ.9 ರಂದು ವಿರಾಜಪೇಟೆಯ ತೋರ ಗ್ರಾಮದಲ್ಲಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದವರ ಪೈಕಿ ಮತ್ತೊಂದು ಶವ 13 ದಿನಗಳ ಕಾರ್ಯಾಚರಣೆಯ ನಂತರ ಮಣ್ಣಿನಡಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದುರ್ಘಟನೆಯಲ್ಲಿ ಮೃತಪಟ್ಟ ಅಪ್ಪು ಎಂಬುವವರ ಪತ್ನಿ ಲೀಲಾ(55) ಅವರ ಮೃತದೇಹ ಇದಾಗಿದೆ. ಅಪ್ಪು ಅವರ ಮೃತದೇಹ ಕೆಲವು ದಿನಗಳ ಹಿಂದೆ ಪತ್ತೆಯಾಗಿತ್ತು. ಮಣ್ಣಿನಡಿ ಸಿಲುಕಿಕೊಂಡ ಹತ್ತು ಮಂದಿಯ ಪೈಕಿ ಇದೀಗ ಒಟ್ಟು ಆರು ಮೃತದೇಹಗಳು ಸಿಕ್ಕಿದಂತಾಗಿದೆ.
ಉಳಿದ ನಾಲ್ಕು ಮಂದಿಗಾಗಿ ಶೋಧ ಕಾರ್ಯ ತೀವ್ರಗೊಂಡಿದ್ದು, ಐದಕ್ಕೂ ಹೆಚ್ಚು ಹಿಟಾಚಿ ಯಂತ್ರಗಳು ದುರಂತ ನಡೆದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ.
Next Story