varthabharthi

ರಾಷ್ಟ್ರೀಯ

ವಿಮಾನದಲ್ಲಿ ಬಂದು ವಿಲಾಸಿ ಹೋಟೆಲುಗಳಲ್ಲಿ ಉಳಿದುಕೊಂಡು ಮನೆಗಳ್ಳತನ ಮಾಡುತ್ತಿದ್ದ ಭೂಪ !

ವಾರ್ತಾ ಭಾರತಿ : 22 Aug, 2019

ಪುಣೆ:  ಆಗಾಗ ಪುಣೆಗೆ ವಿಮಾನ ಮೂಲಕ ಪಯಣಿಸಿ ನಂತರ ಅಲ್ಲಿ ವಿವಿಧ ಪ್ರದೇಶಗಳ ವಿಲಾಸಿ ಹೊಟೇಲುಗಳಲ್ಲಿ ಒಂದೆರಡು ದಿನ ಉಳಿದುಕೊಂಡು ಆ ಪ್ರದೇಶದ ಕೆಲ ಮನೆಗಳಲ್ಲಿ ಕಳ್ಳತನ ನಡೆಸಿ ಪರಾರಿಯಾಗುತ್ತಿದ್ದ ಉತ್ತರ ಪ್ರದೇಶದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು 36 ವರ್ಷದ ಅನಿಲ್ ರಾಜಭರ್ ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶದ ಜೌನ್‍ಪುರ್ ಜಿಲ್ಲೆಯ ನಿವಾಸಿಯಾಗಿರುವ ಈತ ಪುಣೆ ಹೊರವಲಯದ ಕೈಗಾರಿಕಾ ನಗರಿ ಪಿಂಪ್ರಿ ಚಿಂಚ್ವಾಡ್ ನಲ್ಲೂ  ಕಳ್ಳತನ ನಡೆಸಿದ್ದ ಎಂದು ದೂರಲಾಗಿದೆ.

“ವಕಾಡ್ ಪ್ರದೇಶದಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಹೋಟೆಲುಗಳು ಹಾಗೂ ಲಾಡ್ಜುಗಳ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸುತ್ತಿದ್ದ ಸಂದರ್ಭ ಒಂದು ಹೋಟೆಲಿನ ಉದ್ಯೋಗಿಯೊಬ್ಬರು ಒಬ್ಬ ವ್ಯಕ್ತಿಯ ಶಂಕಾಸ್ಪದ ನಡವಳಿಕೆಯ ಬಗ್ಗೆ ತಿಳಿಸಿದ್ದನ್ನು ಆಧಾರವಾಗಿಸಿ ಹುಡುಕಿ ಆತ ಜೌನ್‍ಪುರದವನೆಂದು ತಿಳಿದು ಅಲ್ಲಿಗೆ ತೆರಳಿ ಬಂಧಿಸಲಾಯಿತು'' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆತನಿಂದ ಒಂದು ಲ್ಯಾಪ್ ಟಾಪ್ ಸಹಿತ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ವಶ ಪಡಿಸಿಕೊಳ್ಳಲಾದ ಬೆಲೆಬಾಳುವ ವಸ್ತುಗಳ ಬೆಲೆ ರೂ. 8 ಲಕ್ಷ ಎಂದು ಅಂದಾಜಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)