varthabharthi

ಕ್ರೀಡೆ

ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿ ದ್ಯುತಿ ಚಂದ್

ವಾರ್ತಾ ಭಾರತಿ : 23 Aug, 2019

ಮುಂಬೈ, ಆ.22: ಇತ್ತೀಚೆಗಿನ ವರ್ಷಗಳಲ್ಲಿ ಮೈದಾನದ ಹೊರಗೆ ಸಾಕಷ್ಟು ಹೋರಾಟವನ್ನು ನಡೆಸಿರುವ ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ಟೋಕಿಯೊ ಒಲಿಂಪಿಕ್ಸ್‌ನತ್ತ ಹೆಚ್ಚು ಗಮನ ಹರಿಸಲು ಬಯಸಿದ್ದಾರೆ.

ಭಾರತದ ವೇಗದ ಓಟಗಾರ್ತಿಯಾಗಿರುವ ಚಂದ್ 100 ಮೀ. ಓಟದಲ್ಲಿ 11.24 ಸೆಕೆಂಡ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ರಾಷ್ಟ್ರ ಹಾಗೂ ಉಪಖಂಡದಲ್ಲಿನ ಯಶಸ್ಸನ್ನು ಜಾಗತಿಕ ಮಟ್ಟಕ್ಕೂ ವಿಸ್ತರಿಸಿರುವ ಚಂದ್ ಈ ವರ್ಷ 11.26 ಸೆಕೆಂಡ್‌ನಲ್ಲಿ ಗುರಿ ತಲುಪಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ 78ನೇ ರ್ಯಾಂಕಿನಲ್ಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನು ಒಂದು ವರ್ಷ ಬಾಕಿಯಿದ್ದು, ಜೈಪುರದ ಓಟಗಾರ್ತಿ ಒಲಿಂಪಿಕ್ಸ್ ಅರ್ಹತಾ ಮಾರ್ಕ್ 11.15ನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ‘‘ಕಠಿಣ ಪರಿಶ್ರಮದಿಂದ ಫಲ ಸಿಗಲಿದೆ ಎನ್ನುವುದು ನನ್ನ ನಂಬಿಕೆ. ಮುಂಬರುವ ಸ್ಪರ್ಧೆಗಳಲ್ಲಿ ನನ್ನ ದೇಶದ ಪರ ಇನಷ್ಟು ಪದಕಗಳನ್ನು ಗೆಲ್ಲಲು ಬಯಸಿದ್ದೇನೆ. ಈ ಕ್ಷಣದಲ್ಲಿ ನನ್ನ ತರಬೇತಿ ವೇಳಾಪಟ್ಟಿ ಕಷ್ಟಕರವಾಗಿದೆ. ಈ ಹಿಂದಿಗಿಂತ ನನ್ನ ಟೈಮಿಂಗ್ ಸಾಕಷ್ಟು ಸುಧಾರಣೆಯಾಗಿದೆ.ನಾನು ಕಠಿಣ ಶ್ರಮಪಡುತ್ತಿದ್ದೇನೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವ ವಿಶ್ವಾಸವಿದೆ. ಈ ವರ್ಷದ ಒಲಿಂಪಿಕ್ ್ಸಗೆ ಅರ್ಹತೆ ಪಡೆಯಲಿದ್ದೇನೆ’’ ಎಂದು ಚಂದ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)