43 ಲಕ್ಷ ರೂ.ಗೆ ಜಪಾನ್ ನಿವಾಸಿಗಳಿಗೆ ಉನ್ನತ ಮಟ್ಟದ ಆತಿಥ್ಯ
ಟೋಕಿಯೋ ಒಲಿಂಪಿಕ್ಸ್
ಟೋಕಿಯೊ, ಆ.22: ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ಗೆ ಟಿಕೆಟ್ ಪಡೆಯಲು ಸಮಸ್ಯೆ ಎದುರಿಸುತ್ತಿದ್ದೀರಾ? 60,000 ಯುಎಸ್ ಡಾಲರ್(ಸುಮಾರು 43 ಲಕ್ಷ ರೂ.)ಇದ್ದರೆ ಇಂತಹ ಸಮಸ್ಯೆಯೇ ಇರುವುದಿಲ್ಲ. ಜಪಾನ್ ನಿವಾಸಿಗಳಿಗೆ ಟೋಕಿಯೊ ಒಲಿಂಪಿಕ್ಸ್ ಆಯೋಜಕರು 60,000 ಡಾಲರ್ಗೆ ಉನ್ನತಮಟ್ಟದ ಆತಿಥ್ಯದ ಪ್ಯಾಕೇಜ್ಗಳ ಕೊಡುಗೆ ನೀಡಲು ಮುಂದಾಗಿದ್ದಾರೆ.
ತುಂಬಾ ಬೆಲೆಬಾಳುವ ಒಲಿಂಪಿಕ್ಸ್ ಆಗಿ ಟೋಕಿಯೊ ರೂಪುಗೊಳ್ಳುತ್ತಿದೆ. ಟಿಕೆಟ್ ಬೇಡಿಕೆ ಅಭೂತಪೂರ್ವವಾಗಿದೆ. ಅನಧಿಕೃತ ಟಿಕೆಟ್ ಮರು ಮಾರಾಟ ಹೆಚ್ಚಾಗುವ ಸಾಧ್ಯತೆಯಿದೆ. ಹೊಟೇಲ್ ಬೆಲೆಗಳು ಗಗನಕ್ಕೇರಿದೆ. ಅಮೆರಿಕ ಹಾಗೂ ಯುರೋಪ್ನಿಂದ ಬರುವ ಜನರಿಗೆ ಇಲ್ಲಿ ಹೊಟೇಲ್ ಪಡೆಯುವುದೇ ಕಷ್ಟಕರವಾಗಿದೆ. ಐಷಾರಾಮಿ ಆತಿಥ್ಯದ ಪ್ಯಾಕೇಜ್ಗಳು ಕುಟುಂಬ, ಸ್ನೇಹಿತರು ಹಾಗೂ ಉದ್ಯಮ ಒಪ್ಪಂದಕ್ಕೆ ಉತ್ತಮ ಅವಕಾಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Next Story