‘ನಿರ್ಮೋಲ್ಲೆಂ ನಿರ್ಮೋಣೆಂ’ ಕೊಂಕಣಿ ಚಲನಚಿತ್ರ ಬಿಡುಗಡೆ
ಮಂಗಳೂರು, ಆ.23: ಪ್ರೆಸ್ಟೊನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹೆನ್ರಿ ಡಿಸಿಲ್ವಾ ಸುರತ್ಕಲ್ ನಿರ್ಮಾಣದಲ್ಲಿ ಮೆಲ್ವಿನ್ ಎಲ್ಪೆಲ್ ನಿರ್ದೇಶನದಲ್ಲಿ ತಯಾರಾದ ನಿರ್ಮಿಲ್ಲೆಂ ನಿರ್ಮೋಣೆಂ ಕೊಂಕಣಿ ಚಲನ ಚಿತ್ರದ ಬಿಡುಗಡೆ ಕಾರ್ಯಕ್ರಮವು ಭಾರತ್ ಮಾಲ್ನ ಬಿಗ್ ಸಿನಿಮಾಸ್ನಲ್ಲಿ ಶುಕ್ರವಾರ ಜರುಗಿತು.
ಮಂಗಳೂರಿನ ವಿಶ್ರಾಂತ ಬಿಷಪ್ ಡಾ.ಅಲೋಸಿಯಸ್ ಪಾವ್ಲ್ ಡಿಸೋಜ ಸಿನಿಮಾ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನಿರ್ಮಿಲ್ಲೆಂ ನಿರ್ಮೋಣೆಂ ಮಂಗಳೂರಿನಲ್ಲಿ ಭಾರತ್ ಸಿನಿಮಾಸ್ ಮತ್ತು ಪಿಆರ್ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮೂಡುಬಿದಿರೆ, ಉಡುಪಿ, ಕಾರ್ಕಳ, ಶಿವಮೊಗ್ಗ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಸುರತ್ಕಲ್ನಲ್ಲಿ ಪ್ರದರ್ಶನ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಹೆನ್ರಿ ಡಿಸಿಲ್ವ ಸುರತ್ಕಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಲ್ಟರ್ ನಂದಳಿಕೆ, ನೋಬರ್ಟ್ ಜಾನ್, ಪ್ರೀತಂ ನೆಲ್ಸನ್ ಹೆನ್ರಿ ಡಿಸಿಲ್ವ ಮೀರಾ ಪಿಂಟೋ, ವಿನ್ನಿ ಫೆರ್ನಾಂಡಿಸ್, ಮೆಲ್ವಿನ್ ಉಪಸ್ಥಿತರಿದ್ದರು.
Next Story