varthabharthi


ಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 24 Aug, 2019

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

 ಪಿಯರ್ಸನ್ ಮಿಪ್ರೊ ಇಂಗ್ಲಿಷ್ ಸ್ಕಾಲರ್ ಪ್ರೋಗ್ರಾಂ 2019

ವಿವರ: ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ತಮ್ಮ ಇಂಗ್ಲಿಷ್ ಓದುವ, ಬರೆಯುವ ಮತ್ತು ಮಾತನಾಡುವ ಕೌಶಲವನ್ನು ಪ್ರೋತ್ಸಾಹಿಸುವ ಉದ್ದೇಶದ ವಿಶಿಷ್ಟ ಸ್ಕಾಲರ್‌ಶಿಪ್. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಕಾರ್ಯಕ್ರಮದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಸ್ಕಾಲರ್‌ಶಿಪ್ ನೀಡಲಾಗುವುದು.

ಅರ್ಹತೆ:18ರಿಂದ 35 ವರ್ಷದೊಳಗಿನ ವಯೋಮಾನದ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು, ಮಿಪ್ರೊ ಇಂಗ್ಲಿಷ್ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರಬೇಕು ಮತ್ತು 8 ಜಿಎಸ್‌ಇ ಮಟ್ಟವನ್ನು ದಾಟಿದವರು ಅರ್ಜಿ ಸಲ್ಲಿಸಬಹುದು. ನೆರವು:

ಆಯ್ಕೆಯಾದ ಅಭ್ಯರ್ಥಿಗಳಿಗೆ 10 ಸಾವಿರ ರೂ. ನೀಡಲಾಗುವುದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ:  http://www.b4s.in/bharati/PMES01

*******************

ವಿದ್ಯಾರ್ಥಿವೇತನ

(ಪ್ರತಿಭೆ ಆಧಾರಿತ):

ಇಂಟರ್‌ನ್ಯಾಷನಲ್ ಶಾರ್ಟ್ ಸ್ಟೋರಿ ಕಾಂಟೆಸ್ಟ್ ಫಾರ್ ಸ್ಕೂಲ್ ಚಿಲ್ಡ್ರನ್ 2019

ವಿವರ: ಯುವ ಬರಹಗಾರರಿಗೆ ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಕಥಾ ಸಾಹಿತ್ಯ ಬರೆಯುವ ಪ್ರತಿಭೆಯನ್ನು ಪ್ರದರ್ಶಿಸಲು ಕಿಡ್ಸ್ ವರ್ಲ್ಡ್ ಫನ್ ಈ ಸ್ಪರ್ಧೆಯ ಮೂಲಕ ಅವಕಾಶ ಒದಗಿಸುತ್ತದೆ. ವಿಶಿಷ್ಟ ಪ್ರತಿಭೆಯನ್ನೊಳಗೊಂಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಉದ್ದೇಶವಿದೆ.

ಅರ್ಹತೆ: 7ರಿಂದ 16 ವರ್ಷ ವಯೋಮಾನದ ವಿದ್ಯಾರ್ಥಿಗಳು ವಿವಿಧ ವಯೋಮಾನ ವರ್ಗದಲ್ಲಿ ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ 9 ಅತ್ಯುತ್ತಮ ಸಣ್ಣ ಕತೆಗಳಿಗೆ 100 ಅಮೆರಿಕನ್ ಡಾಲರ್ ಮೊತ್ತದವರೆಗಿನ ಬಹುಮಾನ ಮತ್ತು ಅಂತರ್‌ರಾಷ್ಟ್ರೀಯ ಆನ್‌ಲೈನ್ ವೇದಿಕೆಯಲ್ಲಿ ಅವರ ಕತೆಯನ್ನು ಪ್ರಕಟಿಸುವ ಅವಕಾಶ ದೊರಕುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 15, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/ ISS13

*******************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಚಾನ್ಸೆಲರ್ ಫೆಲೋಶಿಪ್ ಫಾರ್ ಮ್ಯಾನೇಜರ್ಸ್ ಆಫ್ ಟುಮಾರೋ, ಜರ್ಮನಿ 2019

ವಿವರ: ಜರ್ಮನಿಯ ಅಲೆಕ್ಸಾಂಡರ್ ವಾನ್ ಹಂಬೋಲ್ಟ್ ಫೌಂಡೇಶನ್ ಭಾರತೀಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತದೆ. ತಮ್ಮ ವೃತ್ತಿಯಲ್ಲಿ ಮುನ್ನಡೆ ಸಾಧಿಸಿ ಜಾಗತಿಕ ನೆಟ್‌ವರ್ಕ್‌ನ ಭಾಗವಾಗಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಜರ್ಮನಿಯಲ್ಲಿ ಸ್ವಯಂ ಅಭಿವೃದ್ಧಿ ಯೋಜನೆಯಲ್ಲಿ ಸ್ಟೈಪೆಂಡ್ ಸಹಿತ ಪಾಲ್ಗೊಳ್ಳಲು ಅವಕಾಶವಿದೆ.

ಅರ್ಹತೆ: ಜರ್ಮನ್ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಪಡೆದಿರುವ ಪದವೀಧರ ಭಾರತೀಯ ವಿದ್ಯಾರ್ಥಿಗಳು 1 ವರ್ಷದ ಅವಧಿಯ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 2,150 ಯುರೋದಿಂದ 2,750 ಯುರೋವರೆಗಿನ ಆರ್ಥಿಕ ನೆರವು ನೀಡಲಾಗುವುದು. ಹಾಗೂ ಇತರ ಸೌಲಭ್ಯ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 15, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/CSM1

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)