varthabharthi

ನಿಮ್ಮ ಅಂಕಣ

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ?

ವಾರ್ತಾ ಭಾರತಿ : 26 Aug, 2019
ಅನುರಾಗ್ ಪಂಡಿತ್, ಬೆಂಗಳೂರು

ಮಾನ್ಯರೇ,

ಮೈತ್ರಿ ಸರಕಾರ ಬೀಳುವುದಕ್ಕೆ ಯಾರು ಕಾರಣ? ಎನ್ನುವುದರ ಕುರಿತಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೆಸರೆರಚಿಕೊಳ್ಳುತ್ತಿವೆ. ವಿರೋಧ ಪಕ್ಷವಾಗಿ ನಿಂತು ಯಡಿಯೂರಪ್ಪ ನೇತೃತ್ವದ ವೈಫಲ್ಯಗಳನ್ನು ಟೀಕಿಸುವ ಬದಲು ಪರಸ್ಪರರು ಟೀಕೆಗೆ ಸಮಯ ವ್ಯರ್ಥ ಮಾಡಿಕೊಳ್ಳುವುದನ್ನು ನೋಡಿದರೆ, ಅಧಿಕಾರದ ಚಪಲ ಇನ್ನೂ ಮುಗಿದಿಲ್ಲ ಎನ್ನುವುದು ಅರ್ಥವಾಗುತ್ತದೆ. ದೇವೇಗೌಡರಂತೂ ಕಳೆದುಕೊಂಡ ಅಧಿಕಾರಕ್ಕಾಗಿ ಇನ್ನೂ ಹಪಹಪಿಸುತ್ತಿರುವಂತಿದೆ. ಇಲ್ಲವಾದರೆ, ಅವರು ತನ್ನ ಮಗನನ್ನು ಮುಖ್ಯಮಂತ್ರಿಯನ್ನಾಗಿಸಿದ ಕಾಂಗ್ರೆಸನ್ನು ಟೀಕಿಸುವ ಸಾಹಸಕ್ಕೆ ಇಳಿಯುತ್ತಿರಲಿಲ್ಲ.

ದೇವೇಗೌಡರು ಕಾಂಗ್ರೆಸನ್ನು ಟೀಕಿಸುತ್ತಿರುವ ರೀತಿಯನ್ನು ನೋಡಿದರೆ, ಅವರು ಬಿಜೆಪಿಯ ಕಡೆಗೆ ಆಸಕ್ತರಾಗಿದ್ದಾರೆ ಎನ್ನುವ ವಾಸನೆ ಹೊಡೆಯುತ್ತದೆ. ಸದ್ಯಕ್ಕೆ ಯಡಿಯೂರಪ್ಪ ನೇತೃತ್ವದ ಸರಕಾರ ಅಲ್ಪ ಬಹುಮತದಿಂದ ಅಧಿಕಾರ ಹಿಡಿದಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಬಿಜೆಪಿಯೊಳ

ಗೆ ಬಂಡಾಯವೆದ್ದಿದೆ. ಕೆಲವು ಶಾಸಕರು ಅಧಿಕಾರಕ್ಕಾಗಿ ಈಗಾಗಲೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದಲ್ಲ ಒಂದು ದಿನ ಯಡಿಯೂರಪ್ಪ ಸರಕಾರಕ್ಕೆ ಜೆಡಿಎಸ್‌ನ ಶಾಸಕರ ಅಗತ್ಯ ಬೀಳಬಹುದು ಎನ್ನುವ ದೂರದೃಷ್ಟಿಯಿಂದ ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿರ್ಣಾಯಕ ಸಂದರ್ಭದಲ್ಲಿ ಬಿಜೆಪಿಯ ಜೊತೆಗೆ ಕೈ ಜೋಡಿಸಿ ತನ್ನ ಮಕ್ಕಳನ್ನು ಉಪಮುಖ್ಯಮಂತ್ರಿ ಮಾಡುವ ತಂತ್ರವೂ ಇದರ ಹಿಂದೆ ಇರಬಹುದು. ಯಾವ ಶಾಸಕ ಬಲವೂ ಇಲ್ಲದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದೇ ಬಹುದೊಡ್ಡ ಆಕಸ್ಮಿಕ. ಕುಮಾರಸ್ವಾಮಿಯ ಯಾವ ಪ್ರಯತ್ನವೂ ಇದರ ಹಿಂದೆ ಇಲ್ಲ. ಕುಮಾರಸ್ವಾಮಿ ಎಷ್ಟು ದಿನ ಮುಖ್ಯಮಂತ್ರಿಯಾಗಿದ್ದರೋ ಅದು ಕಾಂಗ್ರೆಸ್ ನೀಡಿದ ಭಿಕ್ಷೆ. ಅದಕ್ಕಾಗಿ ಕೃತಜ್ಞತೆ ಹೇಳಿ ಮೈತ್ರಿ ಅಧ್ಯಾಯವನ್ನು ಮುಗಿಸಿ ಬಿಡುವುದೇ ದೇವೇಗೌಡರಿಗೆ ಸದ್ಯಕ್ಕಿರುವ ಆಯ್ಕೆ. 

ಅನುರಾಗ್ ಪಂಡಿತ್, ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)