varthabharthi

ನಿಮ್ಮ ಅಂಕಣ

ಶೌಚಗುಂಡಿಗಳ ಕಾರ್ಮಿಕರತ್ತ ಗಮನ ಹರಿಸಿ

ವಾರ್ತಾ ಭಾರತಿ : 26 Aug, 2019
ಸದ್ದಾಂಹುಸೇನ ಬಿ. ಬಳಗಾನೂರ ಗಣಿಹಾರ, ವಿಜಯಪುರ

ಮಾನ್ಯರೇ,

ಭಾರತವು ಆಧುನಿಕ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವ ರಾಷ್ಟ್ರವಾಗಿದೆ. ಆದರೆ ನಮ್ಮ ದೇಶದಲ್ಲಿ ಶೌಚಗುಂಡಿಗಳನ್ನು ಸ್ವಚ್ಛಗೊಳಿಸಲು ಯಾವುದೇ ರೀತಿಯ ಯಂತ್ರಗಳನ್ನು ಬಳಸುತ್ತಿಲ್ಲ. ಶೌಚಗುಂಡಿಗಳನ್ನು ಸ್ವಚ್ಛಗೊಳಿಸಲು ಈಗಲೂ ಕಾರ್ಮಿಕರನ್ನೇ ಬಳಸಲಾಗುತ್ತಿದೆ. ಶೌಚಗುಂಡಿಗಳನ್ನು ಸ್ವಚ್ಛಗೊಳಿಸಲು ಇಳಿದ ಏಷ್ಟೋ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಉದಾಹರಣೆಗೆ ಆಗಸ್ಟ್ 22ರಂದು ಉತ್ತರ ಪ್ರದೇಶದ ಗಝಿಯಾಬಾದ್‌ನ ನಂದಗ್ರಾಮ್ ಪ್ರದೇಶದಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಐದು ಮಂದಿ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಕಾರ್ಮಿಕರಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲದ ಕಾರಣ ಅವರು ಪ್ರಾಣ ಕಳೆದುಕೊಳ್ಳುವಂತಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತ ಕಾರ್ಮಿಕರಿಗೆ ಸತ್ತ ಮೇಲೆ ಪರಿಹಾರ ನೀಡುವ ಬದಲು, ಕಾರ್ಮಿಕರು ಸಾಯದಂತೆ ಮುನ್ನೆಚ್ಚರಿಕಾ ಕ್ರಮಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಮಾಡಬೇಕು. ಇದರಿಂದ ಕಾರ್ಮಿಕರ ಜೀವಗಳು ಉಳಿಯುತ್ತವೆ. ಪರಿಹಾರದ ಹಣದಿಂದ ಜೀವ ಕಳೆದುಕೊಂಡ ಕಾರ್ಮಿಕರು ವಾಪಸ್ ಬರುವುದಿಲ್ಲ. ಆದ್ದರಿಂದ ಸಂಬಂಧ ಪಟ್ಟ ಇಲಾಖೆಯವರು ಇದರ ಬಗ್ಗೆ ಗಮನ ಹರಿಸಬೇಕು.

 ಸದ್ದಾಂಹುಸೇನ ಬಿ. ಬಳಗಾನೂರ ಗಣಿಹಾರ, ವಿಜಯಪುರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)