varthabharthi

ಸಿನಿಮಾ

‘ರಾಜಕೀಯಕ್ಕೆ ಪ್ರವೇಶ’ ಕುರಿತು ಕೊನೆಗೂ ಸಂಜಯ್ ದತ್ ಪ್ರತಿಕ್ರಿಯಿಸಿದ್ದು ಹೀಗೆ…

ವಾರ್ತಾ ಭಾರತಿ : 26 Aug, 2019

ಮುಂಬೈ, ಆ.26: ಬಾಲಿವುಡ್ ನಟ ಸಂಜಯ್ ದತ್ ಶೀಘ್ರದಲ್ಲೇ ರಾಜಕಾರಣ ಪ್ರವೇಶಿಸಲಿದ್ದಾರೆ ಎಂದು ಮಹಾರಾಷ್ಟ್ರದ ಸಚಿವರೊಬ್ಬರು ನೀಡಿದ್ದ ಹೇಳಿಕೆ ಭಾರೀ ಕುತೂಹಲ ಕೆರಳಿಸಿತ್ತು. ಇದೀಗ ಈ ಬಗ್ಗೆ ಸ್ವತಃ ಪ್ರತಿಕ್ರಿಯಿಸಿರುವ ಸಂಜಯ್ ದತ್ ತಾನು ರಾಜಕೀಯ ಪ್ರವೇಶಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಜಯ್ ದತ್ ಅವರು ರಾಷ್ಟ್ರೀಯ ಸಮಾಜ್ ಪಕ್ಷವನ್ನು ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ಮಹಾದೇವ್ ಜಾಂಕರ್ ನಿನ್ನೆ ಹೇಳಿಕೆ ನೀಡಿದ್ದರು. ಆದರೆ ತಾನು ಜಾಂಕರ್ ರಿಗೆ ಶುಭ ಹಾರೈಸಿದ್ದೇನೆ ಹೊರತು ಯಾವುದೇ ಪಕ್ಷವನ್ನು ಸೇರಲಿದ್ದೇನೆ ಎಂದು ಹೇಳಿಲ್ಲ ಎಂದಿದ್ದಾರೆ.

“ನಾನು ಯಾವುದೇ ರಾಜಕೀಯ ಪಕ್ಷವನ್ನು ಸೇರುತ್ತಿಲ್ಲ” ಎಂದವರು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)