varthabharthi

ನಿಮ್ಮ ಅಂಕಣ

ರೈಲ್ವೆ ಇಲಾಖೆಯ ದಿಟ್ಟ ಹೆಜ್ಜೆ

ವಾರ್ತಾ ಭಾರತಿ : 28 Aug, 2019
ಪರಮೇಶ್ವರ ಬಿ. ಬಿರಾದಾರ, ಬೀದರ್

ಮಾನ್ಯರೇ,

ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಹಾಗೂ ಕಸ ವಿಲೇವಾರಿಯನ್ನು ಹತೋಟಿಗೆ ತರುವಂತಹ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳುವಂತೆ ರೈಲ್ವೆಯ ಎಲ್ಲಾ ವಲಯಗಳಿಗೆ ಕಟ್ಟುನಿಟ್ಟಿನ ಕಟ್ಟಾಜ್ಞೆಯನ್ನು ರವಾನಿಸಿದ್ದು ಸ್ವಾಗತಾರ್ಹ. ಅಕ್ಟೋಬರ್ 2ರಿಂದ 50 ಮೈಕ್ರಾನ್‌ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಬಳಕೆ ನಿಷೇಧವು ಸಂಪೂರ್ಣವಾಗಿ ಜಾರಿಗೆ ಬರಲಿದೆ. ರೈಲ್ವೆ ಇಲಾಖೆಯು ಪ್ಲಾಸ್ಟಿಕ್ ತಡೆ ಕಾಯ್ದೆ ಅನುಷ್ಠಾನಕ್ಕೆ ತಂದು, ಪುನರ್‌ಬಳಕೆಗೆ ಬಾರದ ಪ್ಲಾಸ್ಟಿಕ್ ಕವರ್‌ಗಳ ನಿಷೇಧಕ್ಕೆ ಮುಂದಾಗಿರುವುದರಿಂದ ಪರಿಸರ ಸಂರಕ್ಷಣೆಗೆ ಸಹಾಯ ಮಾಡಿದಂತಾಗಿದೆ, ಸರಕಾರ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಮಾತ್ರ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಬಿದ್ದು, ಪರಿಸರ ಉಳಿದೀತು.

-ಪರಮೇಶ್ವರ ಬಿ. ಬಿರಾದಾರ, ಬೀದರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)