ಯುಎಇಯಿಂದ ಯೆಮನ್ ಸೈನಿಕರ ಮೇಲೆ ದಾಳಿ: ಅಧ್ಯಕ್ಷ
ಜಿದ್ದಾ, ಆ. 30: ದಕ್ಷಿಣ ಯೆಮನ್ನಲ್ಲಿ ಯುಎಇ ಪಡೆಗಳು ಸರಕಾರಿ ಪಡೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಯೆಮನ್ ಅಧ್ಯಕ್ಷ ಆಬಿದ್ ರಬ್ಬು ಮನ್ಸೂರ್ ಹದಿ ಗುರುವಾರ ಆರೋಪಿಸಿದ್ದಾರೆ.
ಯುಎಇ ಯುದ್ಧ ವಿಮಾನಗಳು ಯೆಮನ್ ಸೇನೆ ಮತ್ತು ನಾಗರಿಕರ ಮೇಲೆ ‘ಅಚ್ಚರಿಯ ದಾಳಿ’ ನಡೆಸಿವೆ ಹಾಗೂ ಏಡನ್ ನಗರ ನಾಶವಾಗುವುದನ್ನು ತಪ್ಪಿಸಲು ನಮ್ಮ ಪಡೆಗಳು ಹಿಂದೆ ಸರಿಯಬೇಕಾಯಿತು ಎಂದು ಅವರು ಹೇಳಿದರು.
ಏಡನ್ ವಿಮಾನ ನಿಲ್ದಾಣದಲ್ಲಿ ಬಂಡುಕೋರರು ಮಿತ್ರ ಪಡೆಗಳ ಮೇಲೆ ದಾಳಿ ನಡೆಸಿದ ಬಳಿಕ, ಬುಧವಾರ ಮತ್ತು ಗುರುವಾರ ಆತ್ಮರಕ್ಷಣೆಗಾಗಿ ತನ್ನ ಪಡೆಗಳು ಸೀಮಿತ ದಾಳಿಗಳನ್ನು ನಡೆಸಿವೆ ಎಂದು ಯುಎಇ ಹೇಳಿದೆ.
Next Story