varthabharthi

ಸುಗ್ಗಿ

ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ಹಕ್ಕು

ವಾರ್ತಾ ಭಾರತಿ : 1 Sep, 2019
ಕೃಪೆ: ದಿ ಟೈಮ್ಸ್ ಆಫ್ ಇಂಡಿಯಾ

ಯಾವುದೇ ವ್ಯಾಪಾರ, ವಾಣಿಜ್ಯ ಅಥವಾ ವೃತ್ತಿಯಲ್ಲಿ ತೆರಿಗೆ ವಿಧಿಸುವಿಕೆಯು ಆ ವ್ಯಾಪಾರ, ವಾಣಿಜ್ಯ ಅಥವಾ ವೃತ್ತಿಯ ಮುಂದುವರಿಕೆಯನ್ನೇ ಅಸಾಧ್ಯವಾಗಿಸುವುದಾದಲ್ಲಿ ಮಾತ್ರ ಅಂತಹ ತೆರಿಗೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ ಮಾಧ್ಯಮ ಸಂಸ್ಥೆಯೊಂದರ ವಿಷಯದಲ್ಲಿ ತೆರಿಗೆಯು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಪರಿಣಾಮ ಬೀರುತ್ತದೆಂದಾದಲ್ಲಿ, ಅಂದರೆ ಪತ್ರಿಕೆಯನ್ನು ವಿಪರೀತ ದುಬಾರಿಯಾಗಿ ಮಾಡಿ ನಾಗರಿಕರಿಗೆ ಅದನ್ನು ಕೊಂಡುಕೊಳ್ಳುವುದೇ ಕಷ್ಟವಾಗುತ್ತದೆಂದಾದಲ್ಲಿ ಆಗ ಆ ತೆರಿಗೆಯು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆಯುವ ದಾಳಿ ಎಂದು ಸರಕಾರ ಆ ತೆರಿಗೆ ವಿಧಿಸುವುದನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. 

-ಅರುಣ್ ಜೇಟ್ಲಿ

ಇತ್ತೀಚೆಗೆ ನಿಧನರಾದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು 2015ರಲ್ಲಿ ಮಾಡಿದ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸದ ಆಯ್ದ ಭಾಗಗಳಾಗಿವೆ ಇದು. ಆಗ ಅವರು ಕೇಂದ್ರ ಹಣಕಾಸು, ಮಾಹಿತಿ ಹಾಗೂ ಪ್ರಸಾರ ಸಚಿವರಾಗಿದ್ದರು.

ಸಂವಿಧಾನವು ಮುಕ್ತ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಬಹಳ ದೊಡ್ಡ ಸ್ಥಾನ, ಮಹತ್ವ ನೀಡಿದೆ. ಸಕಾರಣವಾದ ನಿಷೇಧಗಳ ಮೂಲಕ ಇತರ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸಬಹುದು, ಮಿತಿಗೆ ಒಳಪಡಿಸಬಹುದು. ಆದರೆ ಸಂವಿಧಾನದ 19(2)ನೇ ಪರಿಚ್ಛೇದದಲ್ಲಿ ಉಲ್ಲೇ ಖಿಸಲಾದ ಸಂದರ್ಭಗಳಲ್ಲಿ ಯಾವುದೇ ಸಂದರ್ಭದೊಂದಿಗೆ ಸಂಬಂಧ ಹೊಂದಿದ್ದಲ್ಲಿ ಮಾತ್ರ, ಅಂತಹ ಸಂದರ್ಭದಲ್ಲಷ್ಟೇ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಮೊಟಕುಗೊಳಿಸಬಹುದು.

ಭಾರತದ ಸಂವಿಧಾನೋತ್ತರ ಇತಿಹಾಸದಲ್ಲಿ ಹಲವು ಮೂಲಭೂತದ ಹಕ್ಕುಗಳು ಕಳೆದ 65 ವರ್ಷಗಳಲ್ಲಿ ದುರ್ಬಲಗೊಂಡಿರುವುದು ಕಂಡು ಬರುತ್ತದೆ. ತುರ್ತುಪರಿಸ್ಥಿತಿಯ ವೇಳೆ ಬದುಕುವ ಮತ್ತು ಸ್ವಾತಂತ್ರದ ಹಕ್ಕನ್ನು ಅಕ್ಷರಶಃ ನಾಶಗೊಳಿಸಲಾಯಿತು. ನಿಯಂತ್ರಿತ ಅರ್ಥವ್ಯವಸ್ಥೆಯ ದಿನಗಳಲ್ಲಿ ವ್ಯಾಪಾರ ಮಾಡುವ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಯಿತು. ತುರ್ತು ಪರಿಸ್ಥಿತಿಯ ವೇಳೆ ಆಸ್ತಿ ಹೊಂದುವ ಹಕ್ಕನ್ನು ರದ್ದು ಪಡಿಸಲಾಯಿತು.

ಆದರೆ ವಾಕ್ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕನ್ನು ನಿಗದಿತವಾಗಿ ಬಲಪಡಿಸಲಾಗಿದೆ. ಆದ್ದರಿಂದ ಈ ಹಕ್ಕನ್ನು ವಿಸ್ತರಿಸುವ ಮತ್ತು ಬಲಪಡಿಸುವ ಒಂದು ರಾಷ್ಟ್ರೀಯ ನೀತಿ ಇಲ್ಲಿ ಸತತವಾಗಿ ಅಸ್ತಿತ್ವದಲ್ಲಿ ಉಳಿದು ಬಂದಿದೆ.

 ವರ್ತಮಾನ ಪತ್ರಿಕೆಯೊಂದನ್ನು ಆರಂಭಿಸುವಾಗ ಅದಕ್ಕೆ ಸರಕಾರ ಅತಿಯಾದ ಪರವಾನಿಗೆ ಶುಲ್ಕ ವಿಧಿಸುವುದು ಸಾಂವಿಧಾನಿಕವಾಗಿ ಅಸಿಂಧು ಎಂದು ಸಂವಿಧಾನದ ಆರಂಭಿಕ ವರ್ಷಗಳಲ್ಲಿ ಅದು ಹೇಳಿತ್ತು. ಬಳಿಕ ಮೊದಲ ದಶಕದಲ್ಲೇ ಒಂದು ಮಾಧ್ಯಮ ಸಂಸ್ಥೆಯ ಮೇಲೆ ವೇತನ ಸಮಿತಿಯು ಸಂಸ್ಥೆ ಹೊರಲಾರದ ಹೊರೆಯನ್ನು ಮೇಲೆ ಹೊರಿಸುವುದು ವಾಕ್ ಸ್ವಾತಂತ್ರಕ್ಕೆ ಹಾನಿ ಉಂಟುಮಾಡುತ್ತದೆಂದು ಕೂಡ ಅದು ಹೇಳಿತ್ತು.

ವರ್ತಮಾನ ಪತ್ರಿಕೆಯೊಂದರ ವಾಣಿಜ್ಯ ಹಿತಾಸಕ್ತಿಗಳನ್ನು ಅದರ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನಿಂದ ಬೇರ್ಪಡಿಸಲು ಸಾಧ್ಯವೇ? ಸಕಾಲ್ ವರ್ತಮಾನ ಪತ್ರಿಕೆಯ ಮೊಕದ್ದಮೆಯಲ್ಲಿ ಸರಕಾರವು ವರ್ತಮಾನ ಪತ್ರಿಕೆಯೊಂದನ್ನು ಮಾರಾಟಮಾಡುವ ಅದರ ಬೆಲೆಯನ್ನು ನಿಯಂತ್ರಿಸಲು ನಿರ್ಧರಿಸಿದಾಗ ಸುಪ್ರೀಂಕೋರ್ಟ್ ಹೀಗೆ ಹೇಳಿತು: ಪತ್ರಿಕೆಯ ದಪ್ಪವನ್ನು (ಪುಟಗಳನ್ನು) ಆಧರಿಸಿ ಅದು ತನ್ನ ಮಾರಾಟಬೆಲೆಯನ್ನು ಹೆಚ್ಚಿಸಲೇಬೇಕು ಎಂದು ಸರಕಾರ ಹೇಳಿದ್ದಲ್ಲಿ, ಅದರಿಂದಾಗಿ ಎರಡು ರೀತಿಯ ಪರಿಣಾಮಗಳಾಗುತ್ತವೆ.ಒಂದೋ ಅದರ ದಪ್ಪವನ್ನು (ಹೂರಣವನ್ನು) ಕಡಿಮೆ ಮಾಡಬೇಕಾಗುತ್ತದೆ ಅಥವಾ ಅದರ ಬೆಲೆಯನ್ನು ಹೆಚ್ಚಿಸಬೇಕಾಗುತ್ತದೆ. ಆದರೆ ಬೆಲೆ ಏರಿಸಿದಾಗ ಪತ್ರಿಕೆಯನ್ನು ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ಪತ್ರಿಕೆಯ ಪ್ರಸಾರ ಕಡಿಮೆಯಾಗುತ್ತದೆ. ಆದ್ದರಿಂದ ಪತ್ರಿಕೆಯನ್ನು ಪ್ರಸಾರಮಾಡುವ (ಮಾರಾಟ ಮಾಡುವ) ಹಕ್ಕು ಕೂಡ ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ ಒಂದು ಭಾಗವಾಗಿದೆ.

ಅದೇ ರೀತಿಯಾಗಿ, ವಿದೇಶಿ ವಿನಿಮಯದ ಕೊರತೆ ಇದೆ ಎಂಬ ಕಾರಣಕ್ಕಾಗಿ (ಸಾಕಷ್ಟು ಪ್ರಮಾಣದಲ್ಲಿ ಕಾಗದವನ್ನು ಆಮದು ಮಾಡಿಕೊಳ್ಳುವ ಸಾಧ್ಯವಾಗುತ್ತಿಲ್ಲವಾದ್ದರಿಂದ) ಸರಕಾರವು ವರ್ತಮಾನ ಪತ್ರಿಕೆಯೊಂದರ ಗಾತ್ರದ ಮೇಲೆ ಮಿತಿ ಹೇರಿದಾಗ, ಪತ್ರಿಕೆಯಲ್ಲಿ ಪ್ರಕಟವಾಗುವ ಸರಕಾರದ ಜಾಹೀರಾತುಗಳನ್ನು ಕಡಿತಗೊಳಿಸಿದಾಗ ಕೂಡ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಪರಿಣಾಮವಾಗುತ್ತದೆ: ಯಾಕೆಂದರೆ ಜಾಹೀರಾತುಗಳೇ ಪತ್ರಿಕೆಯ ವಿಷಯ ಪ್ರಕಟನೆಗೆ ಪೂರಕವಾಗಿರುತ್ತದೆ ಎಂದು ಸುಪೀಂಕೋರ್ಟ್ ಅಭಿಪ್ರಾಯಿಸಿತು.

ನ್ಯೂಸ್ ಪ್ರಿಂಟ್ ಕಸ್ಟಮ್ಸ್ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದ ಒಂದು ಮಹತ್ವಪೂರ್ಣ ಮೊಕದ್ದಮೆಯಲ್ಲಿ, ಸುಪ್ರೀಂ ಕೋರ್ಟ್‌ನ ಮುಂದೆ ಒಂದು ಪ್ರಶ್ನೆ ಎದುರಾಯಿತು. ನ್ಯೂಸ್ ಪ್ರಿಂಟ್ ಮೇಲೆ ಕಸ್ಟಮ್ಸ್ ತೆರಿಗೆ ವಿಧಿಸಿರುವುದನ್ನು ಆ ತೆರಿಗೆಯು ‘ಜ್ಞಾನದ ತೆರಿಗೆ’ ಎಂಬ ನೆಲೆಯಲ್ಲಿ ವಿರೋಧಿಸಬಹುದೇ? ಆಗ ಕೂಡ ಪತ್ರಿಕೆಯೊಂದರ ವ್ಯವಹಾರವನ್ನು ಅದರ ವಿಷಯದಿಂದ (ಕಂಟೆಂಟ್) ಬೇರ್ಪಡಿಸಲು ಎಂದಿಗೂ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

ಮುಂದಿನ ಸರಕಾರಗಳು ಸೆನ್ಸಾರ್‌ಶಿಪ್‌ನಂತಹ ಒರಟು ವಿಧಾನಗಳನ್ನು ಅನುಸರಿಸದೇ ಅವುಗಳು ವರ್ತಮಾನ ಪತ್ರಿಕೆಗಳ ಆದಾಯವನ್ನೇ ಮೊಟಕುಗೊಳಿಸುವ ಕ್ರಮಗಳನ್ನು ಸಭೆ ಯಲ್ಲಿ ರಾಮನಾಥ ಗೊಯೆಂಕಾ ಹೇಳಿದ್ದರು. ಈ ಅಭಿಪ್ರಾಯವನ್ನು ಒಪ್ಪಿಕೊಂಡ ನ್ಯಾಯಾಲ ಯವು ವರ್ತಮಾನ ಪತ್ರಿಕೆಗಳ ಮೇಲೆ ವಿಪರೀತ ತೆರಿಗೆ ವಿಧಿಸುವುದರಿಂದ ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಪ್ರತಿಕೂಲ ಪರಿಣಾಮವಾಗಬಹುದು ಎಂದು ಹೇಳಿತ್ತು.

 ಯಾವುದೇ ವ್ಯಾಪಾರ, ವಾಣಿಜ್ಯ ಅಥವಾ ವೃತ್ತಿಯಲ್ಲಿ ತೆರಿಗೆ ವಿಧಿಸುವಿಕೆಯು ಆ ವ್ಯಾಪಾರ, ವಾಣಿಜ್ಯ ಅಥವಾ ವೃತ್ತಿಯ ಮುಂದುವರಿಕೆಯನ್ನೇ ಅಸಾಧ್ಯವಾಗಿಸುವುದಾದಲ್ಲಿ ಮಾತ್ರ ಅಂತಹ ತೆರಿಗೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ ಮಾಧ್ಯಮ ಸಂಸ್ಥೆಯೊಂದರ ವಿಷಯದಲ್ಲಿ ತೆರಿಗೆಯು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಪರಿಣಾಮ ಬೀರುತ್ತದೆಂದಾದಲ್ಲಿ, ಅಂದರೆ ಪತ್ರಿಕೆಯನ್ನು ವಿಪರೀತ ದುಬಾರಿಯಾಗಿ ಮಾಡಿ ನಾಗರಿಕರಿಗೆ ಅದನ್ನು ಕೊಂಡುಕೊಳ್ಳುವುದೇ ಕಷ್ಟವಾಗುತ್ತದೆಂದಾದಲ್ಲಿ ಆಗ ಆ ತೆರಿಗೆಯು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆಯುವ ದಾಳಿ ಎಂದು ಸರಕಾರ ಆ ತೆರಿಗೆ ವಿಧಿಸುವುದನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

 ಹಾಗಾಗಿ ಟಾಟಾ ಯೆಲ್ಲೋ ಪೇಜಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಾಣಿಜ್ಯ ವಾಕ್ ಸ್ವಾತಂತ್ರ, ಅಂದರೆ ಜಾಹೀರಾತು ಕೂಡ ವಾಕ್ ಸ್ವಾತಂತ್ರದ, ಅಭಿವ್ಯಕ್ತಿ ಸ್ವಾತಂತ್ರದ ಒಂದು ಭಾಗವೆಂದೇ ಪರಿಗಣಿಸಿತು. ಆದರೆ ಈ ವಿಚಾರ ಇನ್ನೂ ಅನುಮಾನಾಸ್ಪದವಾಗಿಯೇ ಇದೆ. ಯಾಕೆಂದರೆ ಈ ವಾದವನ್ನು ಮುಂದುವರಿಸಿದಲ್ಲಿ, ನಾಗರಿಕರು ಹಣ ತೆತ್ತು ಪತ್ರಿಕೆಗಳಲ್ಲಿ ತಮಗೆ ಬೇಕಾದಂತಹ ಸುದ್ದಿಗಳನ್ನು, ವಿಷಯಗಳನ್ನು ಪ್ರಕಟಿಸುವ ‘ಪಾವತಿ ಮಾಡಿದ ಸುದ್ದಿ’ (‘ಪೇಯಿಡ್’ ನ್ಯೂಸ್) ಅಂದರೆ ವಾಣಿಜ್ಯ ಸ್ವಾತಂತ್ರ ಕೂಡ ಮುಕ್ತ ಅಭಿವ್ಯಕ್ತಿ ಸ್ವಾತಂತ್ರವೆಂದು ವಾದಿಸಬಹುದು.

ಪಾವತಿ ಸುದ್ದಿ ಒಂದು ವಾಸ್ತವವಾಗಿದೆ. ಆದ್ದರಿಂದ ಟಾಟಾ ಪ್ಲಸ್ ಭಾರತದಲ್ಲಿ ಅನುಸರಿಸಿದ್ದ ಅಮೆರಿಕನ್ ತೀರ್ಪುಗಳ ಪೂರ್ವ ನಿದರ್ಶನವನ್ನು ಅನುಸರಿಸುವುದಾದಲ್ಲಿ, ಮುಕ್ತ ಅಭಿವ್ಯಕ್ತಿ ಸ್ವಾತಂತ್ರವು ಪೇಯ್ಡಾ ನ್ಯೂಸ್ ಕೂಡ ಒಂದು ಹಕ್ಕು ಎಂದು ಒಪ್ಪಿಕೊಳ್ಳುತ್ತದೆಯೇ? ಪೇಯ್ಡಿ ನ್ಯೂಸ್ ಕೂಡ ಒಂದು ಹಕ್ಕು ಎಂದು ಒಪ್ಪಿಕೊಂಡಲ್ಲಿ (ಈ ಹಕ್ಕಿನ ದುರುಪಯೋಗ ಸಾಧ್ಯವಾದ್ದರಿಂದ) ಇದು ಕೂಡ ಅಭಿವ್ಯಕ್ತಿ ಸ್ವಾತಂತ್ರದ ಒಂದು ಭಾಗ ಎಂದು ವಾದಿಸುವುದು ತರ್ಕಬದ್ಧ ಎಂದು ಅನ್ನಿಸುವುದಿಲ್ಲ. ಆದ್ದರಿಂದ ಈ ಪ್ರಶ್ನೆ ಇಷ್ಟರವರೆಗೆ ನ್ಯಾಯಾಲಯಗಳ ಮುಂದೆ ಬಂದಿಲ್ಲ. ಅದೇನಿದ್ದರೂ, ಪೇಯ್ಡಾ ನ್ಯೂಸ್‌ಗಳ ವಿರುದ್ಧ ದಂಡವಿಧಿಸುವಂತಹ ಒಂದು ಪ್ರಸ್ತಾವವೇನಾದರೂ ಬಂದಲ್ಲಿ, ಆಗ ಅದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರವನ್ನು ಉಲ್ಲಂಘಿಸುತ್ತದೋ ಅಥವಾ ಇಲ್ಲವೋ ಎಂಬ ನೆಲೆಯಲ್ಲೇ ಅದು ಇತ್ಯರ್ಥವಾಗಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)