varthabharthi

ನಿಧನ

ಲಲಿತಾ ಭಟ್

ವಾರ್ತಾ ಭಾರತಿ : 1 Sep, 2019

ಉಡುಪಿ, ಸೆ. 1: ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಸ್ವಾತಂತ್ರ ಹೋರಾಟಗಾರ ಉಡುಪಿ ತೆಂಕಪೇಟೆಯ ಸುಬ್ಬರಾವ್ ಶಾಸ್ತ್ರಿಯವರ ಪುತ್ರಿ, ನೀಲಾವರ ದಿ.ಲಕ್ಷ್ಮೀನಾರಾಯಣ ಭಟ್ಟರ ಪತ್ನಿ ಲಲಿತಾ ಭಟ್(75) ಅಲ್ಪ ಕಾಲದ ಅಸೌಖ್ಯದಿಂದ ಆ.31ರಂದು ಚೆನ್ನೈನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನರಾದರು.

ಕಿದಿಯೂರು ವಿದ್ಯಾಸಮುದ್ರತೀರ್ಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ಕೆಲವು ವರ್ಷಗಳ ಹಿಂದೆ ಚೆನ್ನೈಯಲ್ಲಿ ನೆಲೆಸಿದ್ದರು. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)