varthabharthi

ಸಿನಿಮಾ

ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಸರ್ ಪ್ರೈಸ್ ನೀಡಿದ ಸಲ್ಮಾನ್ ಖಾನ್, ದಬಾಂಗ್ 3 ತಂಡ

ವಾರ್ತಾ ಭಾರತಿ : 3 Sep, 2019

ನಿನ್ನೆ ಹುಟ್ಟುಹಬ್ಬವನ್ನಾಚರಿಸಿದ ನಟ ಕಿಚ್ಚ ಸುದೀಪ್ ರಿಗೆ ಸಲ್ಮಾನ್ ಖಾನ್ ಮತ್ತು ದಬಾಂಗ್ 3 ತಂಡ ಸದಸ್ಯರು ವಿಶೇಷ ಸರ್ ಪ್ರೈಸ್ ನೀಡಿದ್ದಾರೆ.

“ಹುಟ್ಟುಹಬ್ಬದ ಶುಭಾಶಯಗಳು ಕಿಚ್ಚ ಸುದೀಪ್ “ ಎಂದು ಸಲ್ಮಾನ್ ಖಾನ್ ಫಿಲ್ಮ್ಸ್ ಅಫಿಶಿಯಲ್ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದ್ದು, ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ.

ವಿಡಿಯೋದಲ್ಲಿ ಮಾತನಾಡುವ ಸಲ್ಮಾನ್ ಖಾನ್, “ಸುದೀಪ್ ಕಿಚ್ಚ.. ಹುಟ್ಟುಹಬ್ಬದ ಶುಭಾಶಯಗಳು, ಪೈಲ್ವಾನ್ ಗೆ ಆಲ್ ದ ಬೆಸ್ಟ್, ದಬಾಂಗ್ 3ಗೂ ಆಲ್ ದ ಬೆಸ್. ನಿಮಗೆ ಒಳ್ಳೆಯದಾಗಲಿ” ಎಂದಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಸಲ್ಮಾನ್ ಸಹೋದರ ಅರ್ಬಾಝ್ ಖಾನ್, “ಸುದೀಪ್ ಸರ್ ಹುಟ್ಟುಹಬ್ಬದ ಶುಭಾಶಯಗಳು ದಬಾಂಗ್ 3 ಚಿತ್ರದ ಭಾಗವಾಗಿದ್ದಕ್ಕೆ ಧನ್ಯವಾದಗಳು. ನೀವು ನಿಜಕ್ಕೂ ಅದ್ಭುತ ವ್ಯಕ್ತಿ ಮತ್ತು ಅದ್ಭುತ ನಟ” ಎಂದಿದ್ದರು.

ಇನ್ನು ಈ ವಿಡಿಯೋದಲ್ಲಿ ದಬಾಂಗ್ 3 ನಿರ್ದೇಶಕ ಪ್ರಭುದೇವ ಕೂಡ ಸುದೀಪ್ ರಿಗೆ ಶುಭ ಹಾರೈಸಿದ್ದಾರೆ. ದಬಾಂಗ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ನಾಯಕ ನಟನಾಗಿದ್ದರೆ, ಸುದೀಪ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)