ವಾಸು ಅಣ್ಣು ಪರವ
ಮೂಡುಬಿದಿರೆ: ದೈವ ನರ್ತಕ, ಮಾರೂರು ಬಂಗಿಲ ನಿವಾಸಿ ವಾಸು ಅಣ್ಣು ಪರವ (62) ಮಂಗಳವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಾಸು ಅವರು ಹೊಸಂಗಡಿ ಅರಮನೆ ಭಿನ್ನಾಣಿ ಸೀಮೆ ವ್ಯಾಪ್ತಿಗೊಳಪಡುವ 9 ಮಾಗಣೆಗಳಿಗೆ ಸಂಬಂಧಿಸಿ ರಾಜನ್ದೈವ ಕೊಡಮಣಿತ್ತಾಯ ದೈವಗಳ ಪಟ್ಟಿ ಸ್ವೀಕರಿಸಿದ್ದರು. ಸುಮಾರು ನಾಲ್ಕು ದಶಕಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ತಾಯಿ, ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ.
Next Story