ಜಿಎಂಯು ನೂತನ ಡೀನ್ ಆಗಿ ಡಾ. ಹೆಶಮ್ ಮರೈ ನೇಮಕ
ದುಬೈ, ಸೆ. 3: ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸೆಯ ಉಪನ್ಯಾಸಕ ಡಾ. ಹೆಶಮ್ ಮರೈ ಅವರನ್ನು ಅಜ್ಮನ್ನ ಗಲ್ಫ್ ಮೆಡಿಕಲ್ ಯುನಿವೆರ್ಸಿಟಿ (ಜಿಎಂಯು)ದ ದಂತಚಿಕಿತ್ಸೆ ವಿಭಾಗದ ಡೀನ್ ಆಗಿ ನೇಮಕ ಮಾಡಲಾಗಿದೆ.
ಇದಕ್ಕೂ ಮೊದಲು ಡಾ. ಹಶೆಮ್ ಅವರು ಸೌದಿ ಅರೇಬಿಯದ ಇಮಾಮ್ ಅಬ್ದುಲ್ ರಹ್ಮಾನ್ ಬಿನ್ ಫೈಸಲ್ ವಿಶ್ವವಿದ್ಯಾನಿಲಯದ ದಂತಚಿಕಿತ್ಸೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.
1997ರಲ್ಲಿ ಕೈರೊ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಪದವಿ ಮುಗಿಸಿದ ಡಾ. ಹಶೆಮ್ ಅವರು ನಂತರ ಈಜಿಪ್ಟ್ನ ಸುಯೇಜ್ ಕೆನಲ್ ವಿಶ್ವವಿದ್ಯಾನಿಲಯದಿಂದ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಮತ್ತು ವೈದ್ಯ ಪದವಿಯನ್ನು ಪಡೆದುಕೊಂಡರು.
ಡಾ. ಹಶೆಮ್ ಅವರು ಈಜಿಪ್ಟ್, ಸೌದಿ ಅರೇಬಿಯ, ಬಹ್ರೈನ್, ಯುಎಇ, ಪಾಕಿಸ್ತಾನ, ನೆದರ್ಲ್ಯಾಂಡ್ಸ್, ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಸಂಖ್ಯಾತ ಪ್ರಾತ್ಯಕ್ಷಿಕೆಗಳು, ಕಾರ್ಯಗಾರಗಳು ಮತ್ತು ಕೋರ್ಸ್ಗಳನ್ನು ನಡೆಸಿದ್ದಾರೆ.
ಜಿಎಂಯು ಕುಲಪತಿ ಪ್ರೊ. ಹೊಸಮ್ ಹಮ್ದಿ ಅವರು ಡಾ. ಹೆಶಮ್ ಮರೈ ಅವರನ್ನು ತಮ್ಮ ವಿಶ್ವವಿದ್ಯಾನಿಲಯದ ದಂತಚಿಕಿತ್ಸೆ ವಿಭಾಗಕ್ಕೆ ಸ್ವಾಗತಿಸಿದ್ದಾರೆ. ಜಿಎಯುನ ದಂತ ಚಿಕಿತ್ಸಾಲಯ ಯುಎಇಯಲ್ಲಿ ಡಿಎಂಡಿ (ಡಾಕ್ಟರ್ ಆಫ್ ಡೆಂಟಲ್ ಮೆಡಿಸಿನ್) ಕೋರ್ಸ್ ನೀಡುವ ಏಕೈಕ ಕಾಲೇಜ್ ಆಗಿದೆ.