varthabharthi

ಅಂತಾರಾಷ್ಟ್ರೀಯ

ಕಾಬೂಲ್ ಮಧ್ಯ ಭಾಗದಲ್ಲಿ ಭೀಕರ ಆತ್ಮಹತ್ಯಾ ದಾಳಿ; 10 ಸಾವು

ವಾರ್ತಾ ಭಾರತಿ : 5 Sep, 2019

ಕಾಬೂಲ್, ಸೆ. 5: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಗುರುವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ನ್ಯಾಟೋ ಪಡೆಗಳ ಪ್ರಧಾನ ಕೇಂದ್ರ ಮತ್ತು ಅಮೆರಿಕ ರಾಯಭಾರ ಕಚೇರಿಗಳ ಸಮೀಪ ನಡೆದ ಭೀಕರ ಸ್ಫೋಟದಲ್ಲಿ, ಆ ಸ್ಥಳದಲ್ಲಿದ್ದ ಹಲವು ಅಂಗಡಿಗಳು ಮತ್ತು ಕಾರುಗಳು ಧ್ವಂಸಗೊಂಡಿವೆ.

ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರ ವಾಪಸಾತಿಯ ಬಗ್ಗೆ ಅಮೆರಿಕದೊಂದಿಗೆ ತಾಲಿಬಾನ್ ಮಾತುಕತೆ ನಡೆಸುತ್ತಿರುವಾಗಲೇ ಈ ದಾಳಿ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)