varthabharthi

ಅಂತಾರಾಷ್ಟ್ರೀಯ

ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶ: ಜಿಮ್ ಮ್ಯಾಟಿಸ್

ವಾರ್ತಾ ಭಾರತಿ : 5 Sep, 2019

ವಾಶಿಂಗ್ಟನ್, ಸೆ. 5: ಪಾಕಿಸ್ತಾನದಲ್ಲಿ ಪರಮಾಣು ಬಾಂಬ್‌ಗಳು ಮತ್ತು ಉಗ್ರವಾದಿ ಚಿಂತನೆಗಳೆರಡೂ ಇರುವುದರಿಂದ ಆ ದೇಶವು ‘ಅತ್ಯಂತ ಅಪಾಯಕಾರಿ’ ದೇಶವಾಗಿದೆ ಎಂದು ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅಭಿಪ್ರಾಯಪಟ್ಟಿದ್ದಾರೆ ಹಾಗೂ ಪಾಕಿಸ್ತಾನದ ಜನತೆ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ನಾಯಕರನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

9/11ರ ಭಯೋತ್ಪಾದಕ ದಾಳಿ ಬಳಿಕ, ಅಫ್ಘಾನಿಸ್ತಾನದಲ್ಲಿ ಯುದ್ಧ ಸಾರಿದ ಅಮೆರಿಕ ಪಡೆಗಳ ನೇತೃತ್ವವನ್ನು ಮ್ಯಾಟಿಸ್ ಹೊಂದಿದ್ದಾರೆ. ಅವರು ಪಾಕಿಸ್ತಾನದ ಸೇನಾ ನಾಯಕತ್ವದೊಂದಿಗೆ ಒಂದು ದಶಕದ ಕಾಲ ಸಂವಹನ ನಡೆಸಿದ ಅನುಭವವನ್ನು ಹೊಂದಿದ್ದಾರೆ.

ಮಂಗಳವಾರ ಬಿಡುಗಡೆಗೊಂಡ ತನ್ನ ಪುಸ್ತಕ ‘ಕಾಲ್ ಸೈನ್ ಕೇಯಸ್: ಲರ್ನಿಂಗ್ ಟು ಲೀಡ್’ನಲ್ಲಿ 68 ವರ್ಷದ ಮಾಜಿ ಸೇನಾಧಿಕಾರಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ರಶ್ಯದ ವ್ಲಾಡಿವೊಸ್ಟೊಕ್‌ನಲ್ಲಿ ನಡೆಯುತ್ತಿರುವ 5ನೇ ಈಸ್ಟರ್ನ್ ಎಕನಾಮಿಕ್ ಫೋರಂ ಶೃಂಗಸಭೆಯ ನೇಪಥ್ಯದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲೇಶ್ಯ ಪ್ರಧಾನಿ ಡಾ. ಮಹಾತಿರ್ ಮುಹಮ್ಮದ್ ಮಾತುಕತೆ ನಡೆಸಿದರು.

ರಶ್ಯದ ವ್ಲಾಡಿವೊಸ್ಟೊಕ್‌ನಲ್ಲಿ ನಡೆಯುತ್ತಿರುವ ‘ಸ್ಟ್ರೀಟ್ ಆಫ್ ದ ಫಾರ್ ಈಸ್ಟ್’ ವಸ್ತುಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಭೇಟಿ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)