varthabharthi

ನಿಮ್ಮ ಅಂಕಣ

ಈಗಲಾದರೂ ಜನರಿಗೆ ಅರ್ಥವಾದೀತೇ?

ವಾರ್ತಾ ಭಾರತಿ : 5 Sep, 2019
-ಜಿ ರವಿಕಿರಣ್ ರೈ, ಕದ್ರಿ, ಮಂಗಳೂರು

ಮಾನ್ಯರೇ,

ಶುಲ್ಕ ಪಾವತಿಸಿದ ಬಳಿಕವೂ ಇವಿಎಂ, ವಿವಿಪ್ಯಾಟ್ ಬಗ್ಗೆ ಆರ್‌ಟಿಐ ಅಡಿ ಮಾಹಿತಿ ನೀಡದ ಬಿಇಎಲ್! ಮಾಹಿತಿ ಬಹಿರಂಗವಾದರೆ ಇಂಜಿನಿಯರ್‌ಗಳ ಜೀವಕ್ಕೆ ಅಪಾಯ ಎಂಬ ಆತಂಕಕಾರಿ ಕಾರಣ ಮುಂದೊಡ್ಡಿದ ಬಿಇಎಲ್ (ವಾ.ಭಾ.05-9-2019)! ಈಗಲಾದರೂ ಜನರಿಗೆ ಅರ್ಥವಾಯಿತೇ ಆರ್‌ಟಿಐ ಕಾನೂನನ್ನು ಮೋದಿ ಸರಕಾರ ಯಾಕೆ ದುರ್ಬಲ ಗೊಳಿಸಿದ್ದು ಎಂದು! ತಮ್ಮ ಇವಿಎಂ ವಂಚನೆ ಹೊರ ಬರಬಾರದು ಎಂಬ ಒಂದೇ ಕಾರಣಕ್ಕೆ ಮೋದಿ ಶಾ ಆರ್‌ಟಿಐ ಕಾನೂನನ್ನು ದುರ್ಬಲಗೊಳಿಸಿದ್ದು! ಪ್ರತಿಯೊಂದು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳು, ಪಕ್ಷಗಳು ಹಾಗೂ ಅವರ ಚಿಹ್ನೆಗಳು ಬೇರೆ ಬೇರೆ ಆಗಿರುವುದರಿಂದ ಈ ವಿವರವನ್ನು ಮೊದಲು ‘‘ಸಿಂಬಲ್ ಲೋಡಿಂಗ್ ಯೂನಿಟ್’’ (ಎಸ್‌ಎಲ್‌ಯು) ನಲ್ಲಿ ಸೆಟ್ ಮಾಡಿ ನಂತರ ಅದನ್ನು ಒಂದೊಂದಾಗಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳೊಂದಿಗೆ ಜೋಡಿಸಿ ಅವುಗಳಲ್ಲಿ ಆಯಾ ಕ್ಷೇತ್ರದ ಮಾಹಿತಿಯನ್ನು ಒಂದೊಂದಾಗಿ ತುಂಬಲಾಗುತ್ತದೆ. ಇದಕ್ಕಾಗಿ ಹೊರಗಿನ ಸಾಫ್ಟ್‌ವೇರ್ ಇಂಜಿಯರ್‌ಗಳನ್ನು ನೇಮಿಸಲಾಗುತ್ತದೆ. ಈ ಘಟ್ಟದಲ್ಲಿಯೇ ಒಂದು ಪಕ್ಷಕ್ಕೆ ಬಿದ್ದ ಮತಗಳು ಇನ್ನೊಂದು ಪಕ್ಷಕ್ಕೆ ತನ್ನಿಂದ ತಾನೇ ವರ್ಗಾವಣೆ ಆಗುವಂತೆ ಈ ಇಂಜಿನಿಯರ್ ಗಳ ಮುಖಾಂತರ ಪ್ರೀ-ಪ್ರೋಗ್ರಾಮಿಂಗ್ ಮಾಡಿಸಲಾಗುತ್ತದೆ ಎಂಬ ಆರೋಪ ಇದೆ. ತಮ್ಮಿಂದ ಮಾಡಿಸಲ್ಪಟ್ಟ ವಂಚಕ ಕೆಲಸದ ಮಾಹಿತಿಯನ್ನು ಈ ಇಂಜಿನಿಯರ್‌ಗಳು ಮಾಧ್ಯಮಗಳಿಗೆ ಬಹಿರಂಗ ಪಡಿಸಿದರೆ ಅವರ ಜೀವಕ್ಕೆ ಆಳುವ ಪಕ್ಷದವರಿಂದಲೇ ಅಪಾಯ ಬರಬಹುದು ಎಂಬ ಅಂಜಿಕೆ ಇರುವುದು ಸತ್ಯ! ಯಾಕೆಂದರೆ ಇವಿಎಂ ವಂಚನೆ ಮೂಲಕ ಅಧಿಕಾರಕ್ಕೆ ಬಂದವರು ತಮ್ಮ ಗುಟ್ಟು ಬಹಿರಂಗ ಆಗದಂತೆ ತಡೆಯಲು ಯಾವುದೇ ಹೀನ ಕೆಲಸಕ್ಕೂ ಹೇಸಲಾರರು, (ನೆನಪಿಡಿ, ಮಧ್ಯ ಪ್ರದೇಶದ ವ್ಯಾಪಮ್ ಹಗರಣದ ಗುಟ್ಟು ಹೊರಬಾರದಂತೆ ತಡೆಯಲು 52 ಜನರ ಹತ್ಯೆ ಮಾಡಲಾಯಿತು ಎನ್ನಲಾಗುತ್ತ್ತಿದೆ!) ಕಾಂಗ್ರೆಸ್‌ನವರು ಡಿಕೆಶಿಯ ಬಂಧನದ ವಿರುದ್ಧ ಬೀದಿಗಿಳಿದು ಗಲಾಟೆ ಮಾಡುವ ಬದಲು ಇವಿಎಂ ವಂಚನೆಯ ವಿರುದ್ಧ ಹಾಗೂ ಬ್ಯಾಲೆಟ್ ಪೇಪರ್ ಮರಳಿ ತರುವುದರ ಪರವಾಗಿ ಹೋರಾಟ ನಡೆಸಬೇಕಾಗಿದೆ. ದೇಶದಲ್ಲಿ ಇಂದು ನಡೆಯುತ್ತಿರುವ ಎಲ್ಲಾ ಅನಿಷ್ಟಗಳಿಗೂ ಇವಿಎಂ ಮೂಲ ಕಾರಣವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)