varthabharthi

ಅಂತಾರಾಷ್ಟ್ರೀಯ

ಟ್ರಂಪ್‌ ವಿರುದ್ಧದ ಬಲವಂತದ ಚುಂಬನ ದೂರನ್ನು ಹಿಂದಕ್ಕೆ ಪಡೆದ ಮಾಜಿ ಸಹಾಯಕಿ

ವಾರ್ತಾ ಭಾರತಿ : 6 Sep, 2019

ನ್ಯೂಯಾರ್ಕ್, ಸೆ. 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ಬಲವಂತದಿಂದ ಚುಂಬಿಸಿದ್ದಾರೆ ಎಂದು ಆರೋಪಿಸಿದ್ದ ಅವರ ಮಾಜಿ ಚುನಾವಣಾ ಪ್ರಚಾರ ತಂಡದ ಸಿಬ್ಬಂದಿ ತನ್ನ ದೂರನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

2016ರಲ್ಲಿ ಫ್ಲೋರಿಡದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯ ಮುನ್ನ ಟ್ರಂಪ್ ನನ್ನನ್ನು ಚುಂಬಿಸಿದ್ದಾರೆ ಎಂದು ಹಿರಿಯ ಪ್ರಚಾರ ಸಿಬ್ಬಂದಿಯಾಗಿದ್ದ ಆಫ್ರಿಕನ್-ಅಮೆರಿಕನ್ ಮಹಿಳೆ ಅ್ಯಲ್ವಾ ಜಾನ್ಸನ್ ಆರೋಪಿಸಿದ್ದರು.

ಜೂನ್‌ನಲ್ಲಿ ತಿರಸ್ಕರಿಸಲ್ಪಟ್ಟ ನನ್ನ ದೂರಿಗೆ ನಾನು ತಿದ್ದುಪಡಿ ಮಾಡುವುದಿಲ್ಲ ಎಂದು ಗುರುವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಜಾನ್ಸನ್ ಹೇಳಿದರು. ಅವರ ದೂರನ್ನು ತಿರಸ್ಕರಿಸಿದ್ದ ನ್ಯಾಯಾಧೀಶರು, ದೂರನ್ನು ಪರಿಷ್ಕರಿಸುವ ಅವಕಾಶವೊಂದನ್ನು ದೂರುದಾರೆಗೆ ನೀಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)