varthabharthi

ಗಲ್ಫ್ ಸುದ್ದಿ

ದಮ್ಮಾಮ್: ಐ.ಎಫ್.ಎಫ್.ನಿಂದ ಹಜ್ಜಾಜಿಗಳ ಸೇವಕರಿಗೆ ಅಭಿನಂದನಾ ಕಾರ್ಯಕ್ರಮ

ವಾರ್ತಾ ಭಾರತಿ : 7 Sep, 2019

ದಮ್ಮಾಮ್, ಸೆ.7: ಹಜ್ಜಾಜಿಗಳ ಸೇವೆಗೈದ ಸ್ವಯಂ ಸೇವಕರಿಗಾಗಿ ಇಂಡಿಯಾ ಫ್ರಟರ್ನಿಟಿ ಫೋರಂ(ಐ.ಎಫ್.ಎಫ್.) ಪೂರ್ವ ಪ್ರಾಂತ್ಯದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಅಲ್ ಖೋಬಾರ್ ನಗರದ ರಫಾ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಶರೀಫ್ ರೆಂಗೇಲ್‌ ಕಿರಾಅತ್ ಪಠಣದೊಂದಿಗೆ ಆರಂಭಗೊಂಡಿತು. ಇಂಡಿಯನ್ ಸೋಶಿಯಲ್ ಫೋರಂ ಅಧ್ಯಕ್ಷ ಮಹಮ್ಮದ್ ಶರೀಫ್ ನೆರೆದಿದ್ದ ಎಲ್ಲಾ ಹಜ್ಜಾಜಿಗಳ ಸೇವಕರನ್ನು ಅಭಿನಂದಿಸಿದರು‌‌ ಮತ್ತು ಸೇವೆಯ ಸ್ಥೂಲ ವಿವರವನ್ನು ನೀಡಿದರು. ಈ ವರ್ಷದ ಹಜ್ಜಾಜಿಗಳ ಸೇವೆಯ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.‌‌ ನಂತರ‌ ಹಜ್ಜ್ ಸೇವೆಗೆ ಬಂದಿದ್ದ ಸ್ವಯಂ ಸೇವಕರು ಹಜ್ಜಾಜಿಗಳ ಸೇವೆಯ‌ ತಮ್ಮ ಮನ ಮಿಡಿಯುವ ಅನುಭವಗಳನ್ನು ಹಂಚಿಕೊಂಡರು.

ಮುಖ್ಯ ಅಥಿತಿಗಳಾಗಿ ಐ.ಎಫ್.ಎಫ್. ಪೂರ್ವ ಪ್ರಾಂತ್ಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಸಾಜಿದ್ ವಳವೂರು, ಐ.ಎಫ್.ಎಫ್. ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಮುಹಮ್ಮದ್ ಇಮ್ತಿಯಾಝ್, ಅರೇಬಿಯನ್‌ ಲೋಜಾಮ್ ಜನರಲ್ ಮ್ಯಾನೇಜರ್ ಅರ್ಶದ್ ಅನ್ವರ್,‌  ಜೇಕಬ್ಸ್ ಝೇಟ್ ನ ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಸಯ್ಯದ್ ಮುಕೀರುದ್ದೀನ್, ಐಎಸ್ಎಫ್ ಕಾರ್ಯಕಾರಿ ‌ಸಮಿತಿಯ‌‌ ಸದಸ್ಯ ಯಾಸೀನ್ ಗುಲ್ಬರ್ಗ ಮತ್ತು ಐ.ಎಫ್.ಎಫ್. ದಿಲ್ಲಿ‌ ರಾಜ್ಯಾಧ್ಯಕ್ಷ ನಸ್ರುಲ್‌ ಚವ್ದರಿ‌ ಇಸ್ಲಾಂ ಉಪಸ್ಥಿತರಿದ್ದರು.

ಫಿರೋಝ್ ಮತ್ತು ಮುಬಾರಕ್ ಶೇಖ್ ಕಾರ್ಯಕ್ರಮ ನಿರೂಪಿಸಿದರು. ಮಿಹ್ರಾಜ್‌ ಗುಲ್ಬರ್ಗ ಸ್ವಾಗತಿಸಿದರು. ಫಿರೋಝ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)