varthabharthi


ಸಿನಿಮಾ

ಹಿಂದಿಯಲ್ಲಿ ನೂರು ಕೋಟಿ ರೂ. ದಾಟಿದ ಸಾಹೊ ಗಳಿಕೆ

ವಾರ್ತಾ ಭಾರತಿ : 7 Sep, 2019

2019ರ ಅತ್ಯಂತ ನಿರೀಕ್ಷಿತ ಸಿನೆಮಾ ‘ಸಾಹೊ’ದ ಹಿಂದಿ ಅವತರಣಿಕೆ ನೂರು ಕೋಟಿ ರೂ. ದಾಟಿ ಮುನ್ನುಗ್ಗುತ್ತಿದೆ. ಚಿತ್ರೀಕರಣ ಆರಂಭವಾದ ದಿನದಿಂದ ಸದಾ ಸುದ್ದಿಯಲ್ಲಿದ್ದ ಸಾಹೊ ಸಿನೆಮಾದಲ್ಲಿ ‘ಬಾಹುಬಲಿ’ ಸಿನೆಮಾಗಳಿಂದ ಇಡೀ ಭಾರತೀಯ ಚಿತ್ರರಂಗದಲ್ಲಿ ಮನೆಮಾತಾದ ಪ್ರಭಾಸ್ ನಟಿಸಿರುವುದು ಎಲ್ಲ ಕುತೂಹಲಕ್ಕೆ ಕಾರಣವಾಗಿತ್ತು. ಮತ್ತು ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಸುಜೀತ್ ನಿರ್ದೇಶನದ ಈ ಸಿನೆಮಾ ಬಿಡುಗಡೆಗೊಂಡು ವಿಮರ್ಶಕರಿಂದ ಅಷ್ಟೇನೂ ಉತ್ತಮ ಅಭಿಪ್ರಾಯ ಗಳಿಸದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಹಣ ಬಾಚುವಲ್ಲಿ ಯಶಸ್ವಿಯಾಗಿದೆ. ಹಿಂದಿಯಲ್ಲಿ ಬಿಡುಗಡೆಯಾದ ದಿನ 24.40 ಕೋಟಿ ರೂ. ಬಾಚಿದ ಸಾಹೊ ಎರಡನೇ ದಿನ 25.20 ಕೋಟಿ ರೂ. ಗಳಿಸಿತ್ತು. ಈ ಗಳಿಕೆ ರವಿವಾರ 29.48 ಕೋಟಿ ರೂ.ಗೆ ಏರಿತ್ತು. ಸೋಮವಾರ 14.20 ಕೋಟಿ ರೂ. ಗಳಿಸುವ ಮೂಲಕ ನಾಲ್ಕು ದಿನಗಳಲ್ಲಿ ಸಾಹೊ ಗಳಿಕೆ 93.28 ಕೋಟಿ ರೂ. ತಲುಪಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)