ವರುಣ್ ಧವನ್ನ ಪ್ಲಾಸ್ಟಿಕ್ ಮುಕ್ತ ಕೂಲಿ ನಂ.1
ವರುಣ್ ಧವನ್ ಮತ್ತು ಸಾರಾ ಅಲಿ ಖಾನ್ ಅಭಿನಯದ ‘ಕೂಲಿ ನಂ.1’ ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಗೊಂಡಿದ್ದು ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಸಿನೆಮಾ ತಂಡ ಜನರಿಗೆ ಸಂದೇಶ ರವಾನಿಸಲು ನಿರ್ಧರಿಸಿದೆ. ಪ್ಲಾಸ್ಟಿಕ್ನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮ ಗಳ ಬಗ್ಗೆ ತಿಳಿದುಕೊಂಡಿರುವ ಸಿನೆಮಾ ತಂಡ ಕೂಲಿ ನಂ.1 ಅನ್ನು ಸಂಪೂರ್ಣ ಪ್ಲಾಸ್ಟಿಕ್ ಫ್ರಿಯಾಗಿ ಮಾಡಲು ನಿರ್ಧರಿಸಿದೆ. ಸಿನೆಮಾ ತಂಡ ಪ್ಲಾಸ್ಟಿಕ್ ಫ್ರೀ ಸಿಪ್ಪರ್ಗಳನ್ನು ಬಳಸಲಿದೆ. ಇದೇ ಮೊದಲ ಬಾರಿ ಚಿತ್ರತಂಡವೊಂದು ಸಂಪೂರ್ಣ ಪ್ಲಾಸ್ಟಿಕ್ ಫ್ರೀ ತತ್ವವನ್ನು ಅಳವಡಿಸಿಕೊಂಡಿದೆ. ಇದನ್ನು ಚಿತ್ರದ ನಟರು ಕೆಲವೊಂದು ಭಾವಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಡುವ ಮೂಲಕ ತಿಳಿಸಿದ್ದಾರೆ. ಕೂಲಿ ನಂ.1 ಸಿನೆಮಾವನ್ನು ಡೇವಿಡ್ ಧವನ್ ನಿರ್ದೇಶಿಸುತ್ತಿದ್ದು 1995ರಲ್ಲಿ ಇದೇ ಹೆಸರಿನ ಸಿನೆಮಾ ವನ್ನು ಅಂದಿನ ಸೂಪರ್ಸ್ಟಾರ್ ನಟ ಗೋವಿಂದ್ ಜೊತೆ ತಯಾರಿಸಿದ್ದರು. ವಶು ಭಗ್ನಾನಿ, ಜ್ಯಾಕಿ ಭಗ್ನಾನಿ ಮತ್ತು ದೀಪ್ಶಿಕಾ ದೇಶ್ಮುಖ್ ನಿರ್ಮಿಸುತ್ತಿರುವ ಈ ಚಿತ್ರ 2020ರ ಮೇ 1ರಂದು ಬಿಡುಗಡೆಯಾಗಲಿದೆ.