varthabharthi

ಸಿನಿಮಾ

200 ಕೋಟಿ ರೂ. ಕ್ಲಬ್‌ನೆಡೆಗೆ ಮಿಶನ್ ಮಂಗಳ್

ವಾರ್ತಾ ಭಾರತಿ : 7 Sep, 2019

2019ರ ಆಗಸ್ಟ್ ಬಾಲಿವುಡ್‌ಗೆ ಹಣದ ಹೊಳೆಯನ್ನೇ ಹರಿಸಿದೆ. ಈ ತಿಂಗಳು ತೆರೆಕಂಡ ಎರಡು ಬಿಗ್ ಬಜೆಟ್ ಚಿತ್ರಗಳಾದ ‘ಬಾಟ್ಲಾ ಹೌಸ್’ ಹಾಗೂ ‘ಮಿಶನ್ ಮಂಗಳ್’, ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿವೆ. ಜಾನ್ ಅಬ್ರಹಾಂ ನಾಯಕನಾಗಿರುವ ‘ಬಾಟ್ಲಾ ಹೌಸ್’ ಈಗಾಗಲೇ 83 ಕೋಟಿ ರೂ. ಗಳಿಸಿದ್ದರೆ, ಅಕ್ಷಯ್ ಅಭಿನಯದ ಮಿಶನ್ ‘ಮಿಶನ್ ಮಂಗಳ್’ ಗಳಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಎರಡೇ ವಾರಗಳಲ್ಲಿ ಮಿಶನ್ ಮಂಗಳ್ 185 ಕೋಟಿ ರೂ.ಗಳಿಸಿದ್ದು, ಕೆಲವೇ ದಿನಗಳಲ್ಲಿ 200 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸುವುದು ಖಚಿತವಾಗಿದೆ.

ಮೊದಲ ಬಾರಿಗೆ ಮಂಗಳಗ್ರಹಕ್ಕೆ ಉಪಗ್ರಹವನ್ನು ಕಳುಹಿಸುವ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಆಧರಿಸಿದ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿದೆ. ಮೊದಲ ವಾರದಲ್ಲೇ 128 ಕೋಟಿ ರೂ.ಗಳಿಕೆ ಕಂಡ ಮಿಶನ್ ಮಂಗಳ್‌ನ ದಿನದಿಂದ ದಿನಕ್ಕೆ ಪ್ರಚಂಡ ಯಶಸ್ಸಿನತ್ತ ಸಾಗುತ್ತಿದೆ. ಜಗನ್‌ಶಕ್ತಿ ನಿರ್ದೇಶನದ ಮಿಶನ್‌ಮಂಗಳ್‌ನಲ್ಲಿ ಖ್ಯಾತ ನಟ,ನಟಿಯರ ದಂಡೇ ಇದೆ. ಅಕ್ಷಯ್ ಕುಮಾರ್ ಜೊತಗೆ ವಿದ್ಯಾಬಾಲನ್, ತಾಪ್ಸಿ ಪನ್ನೂ, ಸೋನಾಕ್ಷಿ ಸಿನ್ಹಾ, ಕೃತಿ ಕುಲ್ಬಾರಿ, ನಿತ್ಯಾ ಮೆನನ್ ಹಾಗೂ ಶರ್ಮಾನ್ ಜೋಶಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡದ ಹಿರಿಯ ನಟ ದತ್ತಣ್ಣ ಕೂಡಾ ವಿಜ್ಞಾನಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)