varthabharthi

ಅಂತಾರಾಷ್ಟ್ರೀಯ

ಚಂಡಮಾರುತ: ಬಹಾಮಸ್‌ನಲ್ಲಿ ಮೃತರ ಸಂಖ್ಯೆ 43ಕ್ಕೆ ಏರಿಕೆ

ವಾರ್ತಾ ಭಾರತಿ : 7 Sep, 2019

ಮಾರ್ಶ್ ಹಾರ್ಬರ್ (ಬಹಾಮಸ್), ಸೆ. 7: ಈ ವಾರದ ಆರಂಭದಲ್ಲಿ ಅಟ್ಲಾಂಟಿಕ್ ಸಾಗರದಲ್ಲಿರುವ ಬಹಾಮಸ್ ದ್ವೀಪಸಮೂಹ ದೇಶದ ಮೇಲೆ ಡೊರಿಯನ್ ಚಂಡಮಾರುತ ಅಪ್ಪಳಿಸಿದ್ದು, ಮೃತಪಟ್ಟವರ ಸಂಖ್ಯೆ ಶುಕ್ರವಾರ 43ಕ್ಕೆ ಏರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಖ್ಯೆಯು ಇನ್ನೂ ‘ಗಮನಾರ್ಹವಾಗಿ’ ಹೆಚ್ಚುವ ಭೀತಿಯಿದೆ ಎಂದು ಅವರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ರಕ್ಷಣಾ ಸಿಬ್ಬಂದಿ ಅವಶೇಷಗಳ ಅಡಿಯಿಂದ ಬದುಕಿರುವವರನ್ನು ಹೊರಗೆಳೆಯುತ್ತಿದ್ದಾರೆ.

ಅತ್ಯಂತ ಹೆಚ್ಚಿನ ಆಘಾತಕ್ಕೆ ಒಳಗಾಗಿರುವ ಅಬಾಕೊ ದ್ವೀಪದ 260ಕ್ಕೂ ಅಧಿಕ ನಿವಾಸಿಗಳು ಸರಕಾರ ಒದಗಿಸಿದ ದೋಣಿಯೊಂದರಲ್ಲಿ ಏಳು ಗಂಟೆಗಳಿಗೂ ಅಧಿಕ ಸಮಯವನ್ನು ಕಳೆದ ಬಳಿಕ ರಾಜಧಾನಿ ನಸಾವುಗೆ ಬಂದಿದ್ದಾರೆ. ಇನ್ನೊಂದು ತಂಡವು ಶುಕ್ರವಾರ ರಾತ್ರಿ ಆಗಮಿಸಿದೆ. ಬದುಕುಳಿದವರು ತಮ್ಮ ಸಂಬಂಧಿಕರಿಗಾಗಿ ರಾಜಧಾನಿಯ ನಿರಾಶ್ರಿತ ಶಿಬಿರಗಳಲ್ಲಿ ಹುಡುಕಾಡುತ್ತಿದ್ದಾರೆ. ರಾಜಧಾನಿ ನಸಾವು ಚಂಡಮಾರುತದ ಆರ್ಭಟದಿಂದ ತಪ್ಪಿಸಿಕೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)