varthabharthi

ಅಂತಾರಾಷ್ಟ್ರೀಯ

ಅಮೆರಿಕ: ಬಾಂಗ್ಲಾದ ಪಿಎಚ್‌ಡಿ ವಿದ್ಯಾರ್ಥಿಯ ಹತ್ಯೆ

ವಾರ್ತಾ ಭಾರತಿ : 8 Sep, 2019

    ಢಾಕಾ,ಸೆ.8: ಅಮೆರಿಕದ ಲೂಸಿಯಾನಾ ರಾಜ್ಯದಲ್ಲಿ ಬಾಂಗ್ಲಾದೇಶ ಮೂಲದ ಪಿಎಚ್‌ಡಿ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಪೆಟ್ರೋಲ್‌ಪಂಪ್ ಒಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಆತ ಅಪರಿಚಿತ ದುಷ್ಕರ್ಮಿಯ ಗುಂಡಿಗೆ ಬಲಿಯಾಗಿದ್ದಾನೆಂದು ಮಾಧ್ಯಮವೊಂದು ರವಿವಾರ ವರದಿ ಮಾಡಿದೆ.

ಮೃತನನ್ನು 29 ವರ್ಷ ವಯಸ್ಸಿನ ಮುಹಮ್ಮದ್ ಫಿರೋಝುಲ್ ಅಮಿನ್ ರೇಲ್ ಎಂದು ಗುರುತಿಸಲಾಗಿದ್ದು, ಆತ ಲೂಸಿಯಾನಾ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದನೆಂದು ಸುದ್ದಿಸಂಸ್ಥೆಯೊಂದು ತಿಳಿಸಿದೆ.

    ಶನಿವಾರ ಮುಂಜಾನೆ ಸುಮಾರು 3.30ರ ವೇಳೆಗೆ ದುಷ್ಕರ್ಮಿಯೊಬ್ಬ ದರೋಡೆಗೈಯಲು ಈಸ್ಟ್ ಬೇಟನ್ ರೋಜ್‌ನಲ್ಲಿರುವ ಪೆಟ್ರೋಲ್ ಬಂಕ್‌ಗೆ ನುಗ್ಗಿದಾಗ ಫಿರೋಝ್‌ಗೆ ಗುಂಡು ಹಾರಿಸಿದ್ದಾನೆ. ಗಂಭೀರವಾದ ಗುಂಡೇಟಿನ ಗಾಯಗಳಾದ ಫಿರೋಝ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)