varthabharthi

ಕ್ರೀಡೆ

ಏಕೈಕ ಟೆಸ್ಟ್

ಗೆಲುವಿನ ಸನಿಹದಲ್ಲಿ ಅಫ್ಘಾನಿಸ್ತಾನ

ವಾರ್ತಾ ಭಾರತಿ : 9 Sep, 2019

ಚಿತ್ತಗಾಂಗ್, ಸೆ.8: ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ನಲ್ಲಿ ಅಫ್ಘಾನಿಸ್ತಾನ ಗೆಲುವಿನ ಹಾದಿಯಲ್ಲಿದೆ.

  ಟೆಸ್ಟ್‌ನ ನಾಲ್ಕನೇ ದಿನವಾಗಿರುವ ರವಿವಾರ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 398 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ 44.2 ಓವರ್‌ಗಳಲ್ಲಿ 136 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಗೆಲುವಿಗೆ ಇನ್ನೂ 262 ರನ್ ಗಳಿಸಬೇಕಿದೆ.

  ಅಫ್ಘಾನಿಸ್ತಾನ ತಂಡ ನೂತನ ನಾಯಕ ರಶೀದ್ ಖಾನ್ (46ಕ್ಕೆ 3), ಝಹೀರ್ ಖಾನ್(36ಕ್ಕೆ 2) ಮತ್ತು ನಿವೃತ್ತಿಯ ಹಾದಿಯಲ್ಲಿರುವ ಮುಹಮ್ಮದ್ ನಬಿ (38ಕ್ಕೆ 1) ಶಿಸ್ತುಬದ್ಧ ದಾಳಿಯ ನೆರವಿನಲ್ಲಿ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಬಾಂಗ್ಲಾದ ಶಾದ್ಮಾನ್ ಇಸ್ಲಾಂ (41), ಮೊಸಾದೆಕ್ ಹೊಸೈನ್(12), ಮುಶ್ಫೀಕುರ್ರಹೀಂ (23), ಮೊಮಿನುಲ್ ಹಕ್(3), ಲಿಟನ್ ದಾಸ್(9), ಮಹ್ಮೂದುಲ್ಲಾ (7) ಔಟಾಗಿದ್ದಾರೆ.

 ನಾಯಕ ಶಾಕೀಬ್ ಅಲ್ ಹಸನ್(ಔಟಾಗದೆ 39) ಮತ್ತು ಸೌಮ್ಯ ಸರ್ಕಾರ್(ಔಟಾಗದೆ 0) ತಂಡದ ಪರ ಹೋರಾಟ ಮುಂದುವರಿಸಿದ್ದಾರೆ.

 ಶಾದ್ಮಾನ್ ಇಸ್ಲಾಂ ಜತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್ ಲಿಟನ್ ದಾಸ್ ಎರಡನೇ ಓವರ್‌ನಲ್ಲಿ ವಿಕೆಟ್ ಹಿಂದುಗಡೆ ಕ್ಯಾಚ್ ನೀಡಿದ್ದರೂ, ಡಿಆರ್‌ಎಸ್ ಮೂಲಕ ಜೀವದಾನ ಪಡೆದರು. ಆದರೆ ಬಳಿಕ ಅವರು ಬಹಳ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಶಾದ್ಮಾನ್ ಇಸ್ಲಾಂ ತಂಡದ ಪರ ಗರಿಷ್ಠ ಸ್ಕೋರ್‌ದಾಖಲಿಸಿದರು. ಅವರಿಗೆ ನಬಿ ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ.

ಇದಕ್ಕೂ ಮೊದಲು ಅಫ್ಘಾನಿಸ್ತಾನ ಮೂರನೇ ದಿನದ ಮೊತ್ತಕ್ಕೆ 23 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ನಿನ್ನೆ ಆಟ ಕೊನೆಗೊಂಡಾಗ ಅಫ್ಘಾನಿಸ್ತಾನ 8 ವಿಕೆಟ್ ನಷ್ಟದಲ್ಲಿ 237 ರನ್ ಗಳಿಸಿತ್ತು. ಬಾಂಗ್ಲಾದೇಶ ತಂಡ ಇದರಿಂದಾಗಿ ಅಫ್ಘಾನಿಸ್ತಾನಕ್ಕೆ 388 ರನ್‌ಗಳ ಗೆಲುವಿನ ಸವಾಲನ್ನು ವಿಧಿಸಲು ಸಾಧ್ಯವಾಗಿತ್ತು.

 ಸಂಕ್ಷಿಪ್ತ ಸ್ಕೋರ್

►  ಅಫ್ಘಾನಿಸ್ತಾನ ಮೊದಲ ಇನಿಂಗ್ಸ್ 342

►  ಬಾಂಗ್ಲಾ ಮೊದಲ ಇನಿಂಗ್ಸ್ 205

►  ಅಫ್ಘಾನಿಸ್ತಾನ ಎರಡನೇ ಇನಿಂಗ್ಸ್ 90.1 ಓವರ್‌ಗಳಲ್ಲಿ ಆಲೌಟ್ 260

(ಝದ್ರಾನ್ 87,ಅಫ್ಘಾನ್ 50,ಅಫ್ಸಾರ್ ಝಝಾಯ್ ಔಟಾಗದೆ 48;ಶಾಕೀಬ್ ಅಲ್ ಹಸನ್ 58ಕ್ಕೆ 3, ಮೆಹದಿ ಹಸನ್ 35ಕ್ಕೆ 2, ತೈಜುಲ್ 86ಕ್ಕೆ 2, ನಯೀಮ್ 61ಕ್ಕೆ 2).

►  ಬಾಂಗ್ಲಾದೇಶ ತಂಡ ಎರಡನೇ ಇನಿಂಗ್ಸ್ 44.2 ಓವರ್‌ಗಳಲ್ಲಿ 136/6

 ( ಶಾದ್ಮನ್ ಇಸ್ಲಾಂ 41, ಶಾಕೀಬ್ ಔಟಾಗದೆ 39; ರಶೀದ್ ಖಾನ್ 46ಕ್ಕೆ 3, ಝಹೀರ್ ಖಾನ್ 36ಕ್ಕೆ 2).

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)