varthabharthi

ಕ್ರೀಡೆ

ಸಂಸ್ಕಾರ್‌ಧಾಮ್ ಸ್ಪೋರ್ಟ್ಸ್ ಅಕಾಡಮಿ ಉದ್ಘಾಟನೆ

ವಾರ್ತಾ ಭಾರತಿ : 9 Sep, 2019

ಅಹ್ಮದಾಬಾದ್, ಸೆ.8: ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಂಸ್ಕಾರಧಾಮ್ ಕ್ರೀಡಾ ಅಕಾಡಮಿಯನ್ನು ರವಿವಾರ ಉದ್ಘಾಟಿಸಿದರು.

ಫುಟ್ಬಾಲ್ ಪಂದ್ಯವನ್ನು ಆಡುವ ಮೂಲಕ ರಿಜಿಜು ಕ್ರೀಡಾ ಅಕಾಡಮಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿ ವಿಜೇತ, ರಿಯೋ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಸಹಿತ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದರು. ‘‘ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಕ್ರೀಡೆಯ ಬಗ್ಗೆ ಅರಿವು ಮೂಡಿಸಲು, ಸಮಗ್ರ ಬೆಳವಣಿಗೆಗೆ ಈ ಅಕಾಡಮಿ ನೆರವಾಗಲಿದೆ. ಅಕಾಡಮಿಯಲ್ಲಿ ಹಲವು ಕ್ರೀಡೆಗಳಿವೆ ಹಾಗೂ ಯುವಕರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವಕಾಶವನ್ನು ಬಳಸಿಕೊಂಡವರು ಒಂದು ದಿನ ದೇಶಕ್ಕೆ ಹೆಮ್ಮೆ ತರುವ ವಿಶ್ವಾಸ ನನಗಿದೆ’’ ಎಂದು ದೀಪಾ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)